ಡಿ.19ರಿಂದ ಮಂಗಳೂರಿನಲ್ಲಿ ನಾಟಕ ಪ್ರದರ್ಶನ
ಮಂಗಳೂರು, ಡಿ.18: ರಂಗಸಂಗಾತಿ ಹಾಗೂ ಕೆನರಾ ಪದವಿಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಕೆನರಾ ಪದವಿಪೂರ್ವ ಕಾಲೇಜಿನ ಪ್ರಾಂಗಣದಲ್ಲಿ ಡಿ.19 ಮತ್ತು 20 ರಂದು ಎರಡು ನಾಟಕಗಳು ಪ್ರದರ್ಶನಗೊಳ್ಳಲಿವೆ.
ಡಿ.19ರಂದು ಸಂಜೆ 6:30 ಕ್ಕೆ ಕೆನರಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ‘ಭೂತಕಾಲದ ಕಥೆ’ ಎಂಬ ಕನ್ನಡ ನಾಟಕ ಪ್ರದರ್ಶಿಸಲಿದ್ದಾರೆ. ವಿಜಯ ಡೆನ್‌ಡೆತ ಅವರ ಇಂಗ್ಲಿಷ್ ನಾಟಕವನ್ನು ರಂಗಭೂಮಿ ನಿರ್ದೇಶಕ ಯು.ಮೋಹನಚಂದ್ರ ಕನ್ನಡಕ್ಕೆ ರೂಪಾಂತರಿಸಿ ನಿರ್ದೇಶಿಸಿದ್ದಾರೆ. ಡಿ.20ರಂದು ಸಂಜೆ 6:30ಕ್ಕೆ ರಂಗಸಂಗಾತಿಯ ಕಲಾವಿದರಿಂದ ‘ಸಂಪಿಗೆ ನಗರ ಪೊಲೀಸ್ ಸ್ಟೇಶನ್’ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ.
ಶಶಿರಾಜ್‌ರಾವ್ ಕಾವೂರು ರಚಿಸಿರುವ ನಾಟಕವನ್ನು ಮೋಹನಚಂದ್ರ ಯು ನಿರ್ದೇಶಿಸಿದ್ದಾರೆ. ಎರಡೂ ನಾಟಕಗಳಿಗೆ ಮೈಮ್ ರಾಮದಾಸ್ ಸಂಗೀತ ನಿರ್ದೇಶನ ನೀಡಿದ್ದಾರೆ. ಲಕ್ಷ್ಮಣ್‌ಕುಮಾರ್ ಮಲ್ಲೂರು, ಚಂದ್ರಹಾಸ್ ಉಳ್ಳಾಲ್,ಗೋಪಿನಾಥ್ ಭಟ್, ಸಂತೋಷ್ ಶೆಟ್ಟಿ, ಸುಧಾಕರ್ ಸಾಲಿಯಾನ್, ರಂಜನ್ ಬೋಳೂರು, ಪ್ರಭಾಕರ ಕಾಪಿಕಾಡ್,ಮುರಳೀಧರ ಕಾಮತ್,ಶ್ರೀನಿವಾಸ್ ಕುಪ್ಪಿಲ,ಮೈಮ್ ರಾಮದಾಸ್,ಶಶಿರಾಜ್‌ರಾವ್ ಕಾವೂರು ಅಭಿನಯಿಸಿದ್ದಾರೆ.
ಎರಡೂ ನಾಟಕಗಳಿಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ಕಾಲೇಜಿನ ಡೀನ್ ಹಾಗೂ ರಂಗಸಂಗಾತಿ ಅಧ್ಯಕ್ಷ ಗೋಪಾಲ್‌ಕೃಷ್ಣ ಶೆಟ್ಟಿ ತಿಳಿಸಿದ್ದಾರೆ.