ಸಿಧುಗೆ ಕುಕ್ಕಿದ ಹಕ್ಕಿ ಗಿಫ್ಟ್ !
ಚಂಡಿಗಡ,ಡಿ.18: ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರಿಗೆ ಸ್ಟಫ್ಡ್ ಅಥವಾ ಹುಲ್ಲು ತುಂಬಿದ ‘ಬ್ಲಾಕ್ ಪ್ಯಾಟ್ರಿಜ್’ ಪಕ್ಷಿಯನ್ನು ಉಡುಗೊರೆಯಾಗಿ ನೀಡಿದ್ದಕ್ಕಾಗಿ ಸಚಿವ ನವಜೋತ್ ಸಿಂಗ್ ಅವರ ವಿರುದ್ಧ ದಾಖಲಾಗಿರುವ ದೂರಿನ ಕುರಿತಂತೆ ಮೂರು ದಿನಗಳಲ್ಲಿ ವರದಿಯನ್ನು ಸಲ್ಲಿಸುವಂತೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ರಾಜ್ಯದ ಪರಿಸರ ಇಲಾಖೆಗೆ ಸೂಚಿಸಿದೆ.
ಸಿಧು ಅವರು ಇತ್ತೀಚಿಗೆ ಪಾಕಿಸ್ತಾನದಿಂದ ಈ ಪಕ್ಷಿಯನ್ನು ತಂದಿದ್ದರು.
1972ರ ವನ್ಯಜೀವಿ ರಕ್ಷಣಾ ಕಾಯ್ದೆಯಂತೆ ಸಂರಕ್ಷಿತ ಪಕ್ಷಿ ಅಥವಾ ಅದರ ಭಾಗಗಳನ್ನು ಇಟ್ಟುಕೊಳ್ಳಲು ಸೂಕ್ತ ದಾಖಲೆಗಳು ಮತ್ತು ಕಸ್ಟಮ್ಸ್ ಅನುಮತಿ ಕಡ್ಡಾಯವಾಗಿವೆ.
ಸ್ಟಫ್ಡ್ ‘ಬ್ಲಾಕ್ ಪ್ಯಾಟ್ರಿಜ್’ ಪಕ್ಷಿಯನ್ನು ಹೊಂದಿದ್ದಕ್ಕಾಗಿ ವನ್ಯಜೀವಿ ರಕ್ಷಣಾ ಕಾಯ್ದೆಯ ಉಲ್ಲಂಘನೆ ಆರೋಪದಲ್ಲಿ ಡಿ.14ರಂದು ಸಿಧು ವಿರುದ್ಧ ಪ್ರಕರಣ ದಾಖಲಾಗಿತ್ತು.
ಸಿಧು ಅವರು ಈ ಉಡುಗೊರೆಯನ್ನು ನೀಡಿದ್ದಾಗ ಸಿಂಗ್ ಅವರು,ಇಂತಹ ಸಂರಕ್ಷಿತ ಪಕ್ಷಿಯನ್ನು ಇಟ್ಟುಕೊಳ್ಳಲು ಕಾನೂನು ಸಮ್ಮತಿಸುತ್ತದೆಯೇ ಎನ್ನುವುದನ್ನು ತಾನು ಪರಿಶೀಲಿಸಬೇಕಿದೆ ಎಂದು ಹೇಳಿದ್ದರು.