ಸಮಾಜದ ಅಭಿವೃದ್ಧಿಯಲ್ಲಿ ಜನಪ್ರತಿನಿಧಿಗಳ ಪಾತ್ರ ಪ್ರಮುಖ: ಉಸ್ಮಾನ್ ಸಅದಿ ಪಟ್ಟೋರಿ
ಹಜ್ ಉಮ್ರಾ ಯಾತ್ರಿಗಳಿಗೆ ಮಾರ್ಗದರ್ಶನ ಶಿಬಿರ

ಕೊಣಾಜೆ, ಡಿ. 18: ಜನಪ್ರತಿನಿಧಿಗಳು ಆಯಾ ಪ್ರದೇಶದ ಜನರೊಂದಿಗೆ ಸೌಹಾರ್ದತೆಯ ಮೂಲಕ ಬೆರೆಯುವುದೊಂದಿಗೆ ಅವರ ಸುಖ, ದುಃಖಗಳಲ್ಲಿ ಭಾಗಿಯಾಗಬೇಕು. ಸಮಾಜದ ಅಭಿವೃದ್ಧಿಯಲ್ಲಿ ಜನಪ್ರತಿನಿಧಿಗಳ ಪಾತ್ರ ಪ್ರಮುಖವಾಗಿದೆ ಎಂದು ಅಲ್ ಸಬೀಲ್ ಸಂಸ್ಥೆಯ ಉಸ್ಮಾನ ಸಅದಿ ಪಟ್ಟೋರಿ ಅವರು ಹೇಳಿದರು.
ಅವರು ಮಂಗಳೂರಿನ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ಮಂಗಳವಾರ ನಡೆದ ಹಜ್ ಉಮ್ರಾ ಯಾತ್ರಿಗಳಿಗೆ ಮಾರ್ಗದರ್ಶನ ಶಿಬಿರದಲ್ಲಿ ಕೊಣಾಜೆ ಪಂಚಾಯತ್ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ನಝರ್ ಷಾ ಪಟ್ಟೋರಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಸಯ್ಯದ್ ಅಬ್ದುಸಲಾಂ ತಂಙಳ್, ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಹಂಝ ನಾಝೀರ್, ಲತೀಫ್ ಮದನಿ ಕಲ್ಲಡ್ಕ, ಮುಫಿಯಾ ಮುಸ್ಕಾಕ್, ಸಿರಾಜ್ ಮೊದಲಾದವರು ಉಪಸ್ಥಿತರಿದ್ದರು.
Next Story