ಮಲ್ಲಾರು: ಡಿ. 20ರಂದು ಆರೋಗ್ಯ, ನೇತ್ರ ತಪಾಸಣೆ ಶಿಬಿರ

ಕಾಪು, ಡಿ. 19: ಜಮೀಯ್ಯತುಲ್ ಫಲಾಹ್ ಕಾಪು ಘಟಕ, ಲೊಂಬಾರ್ಡ್ ಸ್ಮಾರಕ ಮಿಷನ್ ಆಸ್ಪತ್ರೆ ಉಡುಪಿ, ವೈದ್ಯಕೀಯ ಪ್ರತಿನಿಧಿಗಳ ಸಂಘ ಉಡುಪಿ ಇವರ ಸಹಭಾಗಿತ್ವದಲ್ಲಿ ಡಿ. 20ರಂದು ಬೆಳಗ್ಗೆ 9.30ರಿಂದ ಮಲ್ಲಾರು ಫಕೀರನ ಕಟ್ಟೆ ಖಾಜ ಪೀರಾನ್ ಮೆಡಿಕಲ್ ಸೆಂಟರ್ (ಆಯುಷ್ ಆಸ್ಪತ್ರೆ) ಇಲ್ಲಿ ಉಚಿತ ಸಾಮಾನ್ಯ ಆರೋಗ್ಯ, ನೇತ್ರ ತಪಾಸಣೆ ಶಿಬಿರ ನಡೆಯಲಿದೆ.
ಜಮೀಯ್ಯತುಲ್ ಫಲಾಹ್ ಕಾಪು ಘಟಕ ಅಧ್ಯಕ್ಷ ಶಭಿ ಅಹ್ಮದ್ ಖಾಝಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಮೀಯ್ಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ., ಕೆಪಿಸಿಸಿ ಕಾರ್ಯದರ್ಶಿ ಡಾ. ದೇವಿ ಪ್ರಸಾದ್ ಶೆಟ್ಟಿ, ಹಲೀಮಾ ಸಾಬ್ಜು ಅಡಿಟೋರಿಯಂ ಉದ್ಯಾವರ ಇದರ ಮ್ಯಾನೆಜಿಂಗ್ ಟ್ರಸ್ಟಿ ಹಾಜಿ ಅಬ್ದುಲ್ ಜಲೀಲ್, ಜನರಲ್ ಸರ್ಜನ್ ಡಾ. ಲೀಲಾ ತೋಮಸ್, ನೇತ್ರ ತಜ್ಞೆ ಡಾ. ರೂಪಾಶ್ರೀ, ಡಾ. ಸುಮನ ಆರ್ ಶೆಟ್ಟಿ, ಮಧುಸೂದನ್ ಹೇರೂರ್, ರೋಹಿ ರತ್ನಾಕರ್, ಮುಹಮ್ಮದ್ ಸಾದಿಕ್ ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.
Next Story