ಬೈಕಂಪಾಡಿ: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ವತಿಯಿಂದ ಪ್ರವಾದಿ ಸಂದೇಶ ಪ್ರಚಾರ ಕಾರ್ಯಕ್ರಮ

ಮಂಗಳೂರು, ಡಿ. 19: ಪ್ರವಾದಿಯ ಆದರ್ಶ ಮಸೀದಿ, ಮಜ್ಲಿಸ್ ಗಳಿಗೆ ಸೀಮಿತಗೊಳಿಸದೆ ಸಾಮಾಜಿಕ ಜೀವನದಲ್ಲಿ ಅಳವಡಿಸಲು ಇಮಾಮ್ಸ್ ಕೌನ್ಸಿಲ್ ನ ಅಬ್ದುಲ್ ಮಜೀದ್ ನಿಝಾಮಿ ಕರೆ ನೀಡಿದರು.
ಮಂಗಳೂರಿನ ಬೈಕಂಪಾಡಿಯಲ್ಲಿ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದ.ಕ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಪ್ರವಾದಿ ಸಂದೇಶ ಪ್ರಚಾರ ಕಾರ್ಯಕ್ರಮ ನಡೆಯಿತು. ಇಮಾಮ್ಸ್ ಕೌನ್ಸಿಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಮ್ಮಾರ ಜಾಫರ್ ಫೈಝೀ ಅಧ್ಯಕ್ಷತೆ ವಹಿಸಿದ್ದರು. ರಫೀಕ್ ದಾರಿಮಿ ಸಭೆಯನ್ನು ಉದ್ಘಾಟಿಸಿದರು.
ಮುಖ್ಯ ಭಾಷಣ ಮಾಡಿದ ಅಬ್ದುಲ್ ಮಜೀದ್ ನಿಝಾಮಿ ಪ್ರವಾದಿಯ ಆದರ್ಶ ಜೀವನವನ್ನು ಮಸೀದಿ ಮಜ್ಲಿಸ್ ಗಳಿಗೆ ಸೀಮಿತಗೊಳಿಸದೆ ಸಾರ್ವಜನಿಕ, ಸಾಮಾಜಿಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಶಾಫೀ ಬೆಳ್ಳಾರೆ ಸಂದೇಶ ಭಾಷಣ ಮಾಡಿದರು. ಮಸೀದಿ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಸಿರಾಜ್ ಕಾವೂರು, ನ್ಯಾಯವಾದಿ ಮುಕ್ತಾರ್ ಅಹ್ಮದ್, ಸಲಾಮ್ ಕಾನಾ, ನವಾಝ್ ಕಾನ ಈ ಸಂದರ್ಭದಲ್ಲಿ ಮಾತನಾಡಿದರು.
ಸಿದ್ದೀಕ್ ಅಂಗರಗುಂಡಿ ಸ್ವಾಗತಿಸಿದರು. ನಿಝಾಮ್ ಅಂಗರಗುಂಡಿ ಕಾರ್ಯಕ್ರಮ ನಿರೂಪಿಸಿ, ರಫೀಕ್ ವಂದಿಸಿದರು.