ಉಡುಪಿ: 28 ಮಂದಿಯಿಂದ ಮರಳು ದಿಬ್ಬ ತೆರವು
ಉಡುಪಿ, ಡಿ.19: ಜಿಲ್ಲೆಯ ಉಡುಪಿ ಮತ್ತು ಬ್ರಹ್ಮಾವರ ತಾಲೂಕಿನ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಇಂದು ಒಟ್ಟು 28 ಮಂದಿ ಮರಳು ದಿಬ್ಬ ತೆರವಿನ ಕಾರ್ಯ ನಡೆಸುತ್ತಿದ್ದು, ನಾಳೆ ಪರವಾನಿಗೆ ಪಡೆದ ಇನ್ನಷ್ಟು ಮಂದಿ ಮರಳುಗಾರಿಕೆ ಪ್ರಾರಂಭಿಸುವ ನಿರೀಕ್ಷೆ ಇದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಪದ್ಮಜಾ ತಿಳಿಸಿದ್ದಾರೆ.
ಜಿಲ್ಲೆಯ ಐದು ಮರಳು ದಿಬ್ಬಗಳ ತೆರವಿಗೆ ಒಟ್ಟು 45 ಮಂದಿ ಅರ್ಹತೆ ಪಡೆದಿದ್ದಾರೆ. ಇವರಲ್ಲಿ 33 ಮಂದಿ ಈಗಾಗಲೇ ಮರಳುಗಾರಿಕೆಗೆ ಪರವಾನಿಗೆಯನ್ನು ಇಲಾಖೆಯಿಂದ ಪಡೆದುಕೊಂಡಿದ್ದಾರೆ. ಇವರಲ್ಲಿ ನಿನ್ನೆಯವರೆಗೆ 12 ಮಂದಿ ಹಾಗೂ ಇಂದು 28 ಮಂದಿ ಮರಳುಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಿ ಮರಳುಗಾರಿಕೆ ಪ್ರಾರಂಭಿಸಲು ಇನ್ನೂ ಪರವಾನಿಗೆ ಪಡೆಯದವರಿದ್ದರೆ ಅವರಿಗೆ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಅವರು ನುಡಿದರು.
Next Story