ಮಂಜನಾಡಿ: ವಿದ್ಯಾರ್ಥಿ ನಿಲಯದಲ್ಲಿದ್ದ ಬಾಲಕ ನಾಪತ್ತೆ

ಮಂಗಳೂರು, ಡಿ.19: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜನಾಡಿ ಅಲ್ ಮದೀನಾ ವಿದ್ಯಾರ್ಥಿ ನಿಲಯದಲ್ಲಿದ್ದ ಬಾಲಕ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.
ಉಪ್ಪಿನಂಗಡಿ ಮೂಲದ ಜಾಫರ್ ಸಾದೀಕ್ (15) ಎಂಬಾತ ಡಿ.5ರಂದು ಹೊರಗಡೆ ಹೋದವನು ವಾಪಸ್ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಾಲಕನನನ್ನು ಯಾರೋ ಪುಸಲಾಯಿಸಿ ಅಪರಿಸಿರುವ ಬಗ್ಗೆ ದೂರು ನೀಡಲಾಗಿದೆ.
15 ವರ್ಷ ಪ್ರಾಯದ 152 ಸೆ.ಮೀ. ಎತ್ತರದ, ಗೋಧಿ ಮೈಬಣ್ಣದ ಕೋಲು ಮುಖದ ಬಲಕಾಲು ಊನಗೊಂಡ ಸಾಧಾರಣ ಮೈಕಟ್ಟು ಹೊಂದಿರುವ ಬಾಲಕ ಕಾಣೆಯಾದ ದಿನದಂದು ನೀಲಿ ಬಣ್ಣದ ಶರ್ಟ್, ಕಪ್ಪುಬಣ್ಣದ ಪ್ಯಾಂಟ್ ಧರಿಸಿದ್ದ. ಕನ್ನಡ, ಬ್ಯಾರಿ, ತುಳು, ಉರ್ದು ಭಾಷೆ ಮಾತನಾಡುವ ಈತನನ್ನು ಕಂಡವರು ದೂ.ಸಂ: 0824-2220536, ಮೊ.ಸಂ: 9480802350 ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story