ಬಂಟ್ವಾಳ: ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಜಾಗೃತಿ ಜಾಥಾ

ಬಂಟ್ವಾಳ, ಡಿ.19: ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಬುಧವಾರ ಬಿ.ಸಿ.ರೋಡಿನ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.
ಮೊಡಂಕಾಪು ದೀಪಿಕಾ ಶಾಲೆಯ ಮತ್ತು ಮೊಡಂಕಾಪು ಕಾರ್ಮೆಲ್ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಅಪರಾಧ ತಡೆಯ ಬಗ್ಗೆ ವಿವರಗಳನ್ನೊಳಗೊಂಡ ಬ್ಯಾನರ್ ಹಾಗೂ ಘೋಷಣೆಗಳನ್ನು ಕೂಗಿಕೊಂಡು ಕೈಕಂಬದಿಂದ ಬಿ.ಸಿ.ರೋಡಿನ ಮುಖ್ಯ ರಸ್ತೆಯವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು.
ಬಂಟ್ವಾಳ ನಗರ ಠಾಣಾ ಎಸ್ಸೈ ಚಂದ್ರಶೇಖರ, ಅಪರಾಧ ತಡೆಯ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಎಸ್ಸೈ ಹರೀಶ್, ಎಎಸ್ಸೈ ಸಂಜೀವ ಹಾಗೂ ಠಾಣೆಯ ಸಿಬ್ಬಂದಿ, ಶಿಕ್ಷಕರಾದ ತಿಪ್ಪೇಸ್ವಾಮಿ, ಮೋಹನ್ ದಾಸ, ಉಮೇಶ್, ಶರ್ಮಿಲಾ, ಸುನಿತಾ ಮತ್ತಿತರರು ಹಾಜರಿದ್ದರು
Next Story