ಬ್ಯಾರಿ ಅಕಾಡಮಿ: ಬ್ಯಾರಿಯೇತರರು ಬರೆದ ಬ್ಯಾರಿ ಕಥೆಗಳಿಗೆ ಆಹ್ವಾನ
ಮಂಗಳೂರು, ಡಿ.20: “ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಬ್ಯಾರಿ ಭಾಷೆ, ಸಂಸ್ಕೃತಿ, ಸಾಹಿತ್ಯದ ಬೆಳವಣಿಗೆಯ ಉದ್ದೇಶದಿಂದ ಪುಸ್ತಕ ಪ್ರಕಟಣಾ ಯೋಜನೆಯಡಿ ಬ್ಯಾರಿಯೇತರರು ಬರೆದ ಬ್ಯಾರಿ ಕಥೆಗಳನ್ನು ಆಹ್ವಾನಿಸಿದೆ.
ಕಥೆಗಳನ್ನು ಟೈಪ್ ಮಾಡಿ ಕಳುಹಿಸುವುದಾದರೆ ನುಡಿ ಫಾಂಟ್‌ನಲ್ಲಿ ಕಳುಹಿಸಬೇಕು. ಹೆಸರು ಮತ್ತು ವಿಳಾಸವನ್ನು ತಪ್ಪದೇ ನಮೂದಿಸಬೇಕು. ಉತ್ತಮ ಕಥೆಗಳನ್ನು ಆಯ್ಕೆ ಮಾಡಿ 'ಬ್ಯಾರಿಯೇತರರು ಬರೆದ ಬ್ಯಾರಿ ಕಥೆಗಳು' ಎಂಬ ಶೀರ್ಷಿಕೆಯಡಿ ಪುಸ್ತಕ ಪ್ರಕಟಿಸಲಾಗುತ್ತದೆ.
ಲೇಖಕರು ಲೇಖನ/ಕಥೆಗಳನ್ನು ತಮ್ಮ ಸಂಪೂರ್ಣ ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ ರಿಜಿಸ್ಟ್ರಾರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ, ಹ್ಯಾಮಿಲ್ಟನ್ ಕಾಂಪ್ಲೆಕ್ಸ್, 1ನೇ ಮಹಡಿ, ಸ್ಟೇಟ್ ಬ್ಯಾಂಕ್, ಮಂಗಳೂರು 575001 ಈ ವಿಳಾಸಕ್ಕೆ ಅಥವಾ bearyacademy@yahoo.in ಇಲ್ಲಿಗೆ ಕಳುಹಿಸಿಕೊಡುವಂತೆ ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story