ರಾಂಗ್ ಸೈಡ್ ನಲ್ಲಿ ಸಂಚರಿಸುತ್ತಿದ್ದ ಕಾರನ್ನು ತಡೆಯಲೆತ್ನಿಸಿದ ಟ್ರಾಫಿಕ್ ಪೊಲೀಸ್ ಅಧಿಕಾರಿಯನ್ನೇ ಎಳೆದೊಯ್ದ ದುರುಳ!
![ರಾಂಗ್ ಸೈಡ್ ನಲ್ಲಿ ಸಂಚರಿಸುತ್ತಿದ್ದ ಕಾರನ್ನು ತಡೆಯಲೆತ್ನಿಸಿದ ಟ್ರಾಫಿಕ್ ಪೊಲೀಸ್ ಅಧಿಕಾರಿಯನ್ನೇ ಎಳೆದೊಯ್ದ ದುರುಳ! ರಾಂಗ್ ಸೈಡ್ ನಲ್ಲಿ ಸಂಚರಿಸುತ್ತಿದ್ದ ಕಾರನ್ನು ತಡೆಯಲೆತ್ನಿಸಿದ ಟ್ರಾಫಿಕ್ ಪೊಲೀಸ್ ಅಧಿಕಾರಿಯನ್ನೇ ಎಳೆದೊಯ್ದ ದುರುಳ!](https://www.varthabharati.in/sites/default/files/images/articles/2018/12/20/168854.gif)
ಗುರ್ಗಾಂವ್, ಡಿ.20: ರಾಂಗ್ ಸೈಡ್ ನಲ್ಲಿ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದವನನ್ನು ನಗರದ ಸಿಗ್ನೇಚರ್ ಟವರ್ ಚೌಕ್ ಸಮೀಪ ಟ್ರಾಪಿಕ್ ಪೊಲೀಸ್ ಅಧಿಕಾರಿಯೊಬ್ಬರು ನಿಲ್ಲಿಸಲು ಯತ್ನಿಸಿದಾಗ ಪರಾರಿಯಾಗಲೆತ್ನಿಸಿದ ಚಾಲಕ ವಾಹನದೆದುರು ನಿಂತ ಪೊಲೀಸ್ ಅಧಿಕಾರಿಯತ್ತ ಕಾರು ಚಲಾಯಿಸಿ ಅಧಿಕಾರಿಯನ್ನು ಸ್ವಲ್ಪ ದೂರ ಎಳೆದುಕೊಂಡು ಹೋದ ಆಘಾತಕಾರಿ ಘಟನೆ ವರದಿಯಾಗಿದೆ. ಪ್ರತ್ಯಕ್ಷದರ್ಶಿ ಸಾಕ್ಷಿಯೊಬ್ಬರು ಘಟನೆಯನ್ನು ತಮ್ಮ ಮೊಬೈಲಿನಲ್ಲಿ ಚಿತ್ರೀಕರಿಸಿದ್ದಾರೆ.
ವೀಡಿಯೊದಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಕಾರಿನತ್ತ ಸಾಗುತ್ತಿದ್ದಂತೆಯೇ ಚಾಲಕ ಕಾರನ್ನು ಹಿಮ್ಮುಖವಾಗಿ ಚಲಾಯಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಆತ ತಪ್ಪಿಸಿಕೊಂಡು ಹೋಗದಿರಲೆಂದು ಪೊಲೀಸ್ ಅಧಿಕಾರಿ ಕಾರಿನ ಎದುರು ನಿಂತು ಬೋನೆಟ್ ಗೆ ಒರಗಿದ್ದಾರೆ. ತಕ್ಷಣ ಅಧಿಕಾರಿಯನ್ನು ಎಳೆದುಕೊಂಡು ಕಾರು ಅನತಿ ದೂರದ ತನಕ ಸಾಗಿದರೂ ಕೊನೆಗೆ ಕಾರಿನ ಚಾಲಕನನ್ನು ನಿಯಂತ್ರಿಸುವಲ್ಲಿ ಪೊಲೀಸ್ ಅಧಿಕಾರಿ ಯಶಸ್ವಿಯಾಗಿದ್ದಾರೆ.
#WATCH: Man stopped by traffic police for driving on the wrong side near Signature Tower Chowk in Gurugram, dragged traffic personnel on the bonnet of his car when the personnel tried to stop him. He was later arrested & the car was also seized. #Haryana (19.12.18) pic.twitter.com/BbyN79ysIW
— ANI (@ANI) December 20, 2018