ಗೋವಾದ ಪಲೋಲೆಂ ಬೀಚ್ ಸನಿಹ ಪ್ರವಾಸಿ ಬ್ರಿಟಿಷ್ ಮಹಿಳೆಯ ಅತ್ಯಾಚಾರ
ಪಣಜಿ, ಡಿ.20: ದಕ್ಷಿಣ ಗೋವಾದ ಪಲೋಲೆಂ ಬೀಚ್ ಸಮೀಪ ಇಂದು ಬೆಳಗ್ಗೆ 42 ವರ್ಷದ ಬ್ರಿಟಿಷ್ ಪ್ರವಾಸಿ ಮಹಿಳೆಯೊಬ್ಬರ ಮೇಲೆ ಕೆಲ ಅಪರಿಚಿತ ವ್ಯಕ್ತಿಗಳು ಅತ್ಯಾಚಾರವೆಸಗಿದ ಘಟನೆ ವರದಿಯಾಗಿದೆ.
ಸಂತ್ರಸ್ತೆ ಕನಕೋನ ರೈಲು ನಿಲ್ದಾಣದಿಂದ ಪಲೋಲೆಂನಲ್ಲಿರುವ ತನ್ನ ಬಾಡಿಗೆ ಕೊಠಡಿಗೆ ತೆರಳುತ್ತಿದ್ದಾಗ ದುಷ್ಕರ್ಮಿಗಳು ಆಕೆಯನ್ನು ತಡೆದು ಅತ್ಯಾಚಾರವೆಸಗಿದ್ದಾರೆಂದು ಆಕೆ ಪೊಲೀಸ್ ದೂರು ದಾಖಲಿಸಿದ್ದಾರೆ.
ಗೋವಾ ಕ್ರೈಂ ಬ್ರ್ಯಾಂಚ್ ಪ್ರಕರಣದ ತನಿಖೆ ನಡೆಸುತ್ತಿದ್ದು ಆರೋಪಿಗಳಿಗೆ ಬಲೆ ಬೀಸಿದೆ. ಸಂತ್ರಸ್ತೆ ನೀಡಿದ ಮಾಹಿತಿಯನ್ವಯ ಶಂಕಿತರ ಪಟ್ಟಿಯೊಂದನ್ನು ತಯಾರಿಸಲಾಗಿದೆ ಎಂದು ಇನ್ಸ್ಪೆಕ್ಟರ್ ರಾಜೇಂದ್ರ ಪ್ರಭುದೇಸಾಯಿ ತಿಳಿಸಿದ್ದಾರೆ. ಐಪಿಸಿಯ ಸೆಕ್ಷನ್ 376 ಅನ್ವಯ ಪ್ರಕರಣ ದಾಖಲಿಸಲಾಗಿದ್ದು ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.
ಸಂತ್ರಸ್ತೆ ಗೋವಾಗೆ ನಿಯಮಿತವಾಗಿ ಪ್ರವಾಸಿ ಋತು ಸಂದರ್ಭ ಭೇಟಿ ನೀಡುವವರಾಗಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
Next Story