Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. others
  3. ವಾರ್ತಾಭಾರತಿ 16ನೇ ವಾರ್ಷಿಕ ವಿಶೇಷಾಂಕ
  4. ಚಾಪ್ಲಿನ್ ಬಾಯಲ್ಲಿ ಹಿಟ್ಲರ್ ಮಾತು

ಚಾಪ್ಲಿನ್ ಬಾಯಲ್ಲಿ ಹಿಟ್ಲರ್ ಮಾತು

‘ದಿ ಗ್ರೇಟ್ ಡಿಕ್ಟೇಟರ್’ ಸಿನೆಮಾದಲ್ಲಿ ಚಾರ್ಲಿ ಚಾಪ್ಲಿನ್ ಮಾಡಿರುವ ಭಾಷಣದ ಕನ್ನಡಾನುವಾದ

ನವೀನ್ ಮಂಡಗದ್ದೆನವೀನ್ ಮಂಡಗದ್ದೆ20 Dec 2018 2:41 PM IST
share
ಚಾಪ್ಲಿನ್ ಬಾಯಲ್ಲಿ ಹಿಟ್ಲರ್ ಮಾತು

ಇಲ್ಲಿ ನನ್ನ ಮಾತನ್ನು ಯಾರು ಕೇಳಿಸಿಕೊಳ್ಳುತ್ತಿದ್ದೀರೊ ನೀವೆಲ್ಲೂ ಕಳೆದುಹೋಗಬಾರದು. ಮಾನಸಿಕ ಹಿಂಸೆ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ. ಭಯದಿಂದ ಓಡುವವರಿಗೆ ಕಹಿ ಅನುಭವಗಳಾಗುತ್ತಿವೆ. ಇದೇ ಇಂದಿನ ಮಾನವ ಅಭಿವೃದ್ಧಿಯ ಸೂಚಕವಾಗಿದೆ. ಮಾನವ ದ್ವೇಷ ಅಳಿದು, ಸರ್ವಾಧಿಕಾರತ್ವ ನಾಶವಾಗಲಿ. ಅಧಿಕಾರವನ್ನು ಜನತೆ ಕೈಗೆತ್ತಿಕೊಳ್ಳಲಿ. ನಾವು ಮಾನವರತ್ತ ಹಿಂದಿರುಗೋಣ. ಜಗತ್ತಿನಲ್ಲಿ ಸ್ವತಂತ್ರ ಮತ್ತು ಮನುಷ್ಯರ ವಯಸ್ಸು ಎರಡೂ ಸಹ ಚಿರಾಯುವಾಗಲಿ.

ಕ್ಷಮೆ ಇರಲಿ, ನಾನು ಸಾಮ್ರಾಟನಾಗಲು ಇಚ್ಛಿಸುವುದಿಲ್ಲ, ಅದು ನನ್ನ ವ್ಯವಹಾರವು ಸಹ ಅಲ್ಲ. ನಾನು ಯಾರನ್ನು ಸಹ ಅಡಿಯಾಳಗಿಸಿಕೊಳ್ಳಲು, ಆಳಲು ಇಷ್ಟಪಡುವುದಿಲ್ಲ. ಸಾಧ್ಯವಾದರೆ ಯಾರಿಗಾದರೂ ಸಹಾಯ ಮಾಡಲು ಆಶಿಸುತ್ತೇನೆ. ಅದು ಯಹೂದಿ, ಕಪ್ಪು ಬಣ್ಣದವನು, ಬಿಳಿ ಬಣ್ಣದವನು ಯಾರಾದರೂ ಆಗಬಹುದು. ನಾವು ಒಬ್ಬರಿಗೊಬ್ಬರು ಸಹಾಯ ಮಾಡಬೇಕು. ಏಕೆಂದರೆ ಮನುಷ್ಯರು ಇರಬೇಕಾದುದೆ ಹಾಗೆ. ನಾವು ಇನ್ನೊಬ್ಬರ ಸಂತೋಷಕ್ಕಾಗಿ ಬದುಕಬೇಕು ಆದರೆ ಲಾಭಕೋರತನಕ್ಕಾಗಿ ಅಲ್ಲ. ಇನ್ನೊಬ್ಬರನ್ನು ಕಾರಣವಿಲ್ಲದೆ ದ್ವೇಷಿಸಬಾರದು.

ಈ ಭೂಮಿ ಪ್ರತಿಯೊಬ್ಬರ ವಾಸಸ್ಥಾನ. ಭೂಮಿಯು ಸರಳವಾದ ಅಗತ್ಯವನ್ನು ಪೂರೈಸುತ್ತದೆ. ಇಂದಿನ ಜಗತ್ತಿನಲ್ಲಿ ಮನುಷ್ಯನ ಆತ್ಮದಲ್ಲಿ ನಂಜು ಮತ್ತು ಲೋಭತನವೇ ತುಂಬಿಕೊಂಡಿದೆ. ಜಗತ್ತು ದ್ವೇಷವೆಂಬ ತಡೆಗೋಡೆಯಿಂದ ನಿರ್ಮಿಸಲ್ಪಟ್ಟಿದೆ ಎಂಬಂತಹ ಪರಿಸ್ಥಿತಿ ಇದೆ.ಲೋಭತನ ಮತ್ತು ರಕ್ತಪಾತಗಳು ತಮ್ಮ ರಣಹೆಜ್ಜೆಗಳನ್ನು ಬಲವಾಗಿ ಇರಿಸಿವೆ. ಅಭಿವೃದ್ಧಿಯು ವೇಗವಾಗಿದೆ. ಆದರೆ ನಮ್ಮತನಗಳನ್ನು ಕಳೆದುಕೊಳ್ಳುತ್ತಿದ್ದೇವೆ.

ಯಂತ್ರಗಳು ಅಗತ್ಯವಿರುವುದಕ್ಕಿಂತ ಹೆಚ್ಚು ವಸ್ತುಗಳನ್ನು ಉತ್ಪಾದಿಸುತ್ತಿವೆ. ನಮ್ಮ ಜ್ಞಾನ ಸಿನಿಕತನದಿಂದ ಕೂಡಿದೆ. ಅದು ಕಠೋರ ಮತ್ತು ಕರುಣೆಯಿಲ್ಲದ ಸ್ವರೂಪದಲ್ಲಿದೆ. ನಾವು ಹೆಚ್ಚು ಯೋಚಿಸುತ್ತೇವೆ ಕಡಿಮೆ ಅನುಭವಿಸುತ್ತೇವೆ. ಯಂತ್ರಗಳಿಗಿಂತ ಹೆಚ್ಚು ಮಾನವೀಯತೆ ಅಗತ್ಯವಾಗಿದೆ. ಬುದ್ಧಿವಂತಿಕೆಗಿಂತ ಹೃದಯವಂತಿಕೆ ಬೇಕಿದೆ. ಈ ಗುಣಗಳು ಇಲ್ಲದೆ ಹೋದರೆ ಅಲ್ಲಿ ಖಂಡಿತ ಹಿಂಸೆ ಹುಟ್ಟಿಕೊಳ್ಳುತ್ತದೆ. ಇದರಿಂದ ಎಲ್ಲರೂ ದಾರಿ ಕಾಣದಾಗುತ್ತಾರೆ.

ವಿಮಾನ ಮತ್ತು ರೇಡಿಯೋಗಳು ಪ್ರತಿಯೊಬ್ಬರನ್ನು ಹತ್ತಿರಕ್ಕೆ ತಂದಿವೆ. ಇದರಿಂದ ಭಾವನ್ಮಾತಕವಾಗಿ ಒಳಿತಾಯಿತೆಂದು ಆಲೋಚಿಸುತ್ತೇವೆ. ಈ ಭಾವನಾತ್ಮಕತೆಯು ಜಾಗತಿಕ ಸಹೋದರತ್ವವು ಸರ್ವರ ಏಕತೆಯ ಸಾಧನವಾಗುವಂತೆ ಮಾಡಬೇಕು.

ನನ್ನ ಈ ಧ್ವನಿಯು ಲಕ್ಷಾಂತರ ಜನರಿಗೆ ಕೇಳಿಸುತ್ತಿದೆ. ನೆಲೆ ಕಳೆದುಕೊಂಡ ಲಕ್ಷಾಂತರ ಜನರು, ಮಹಿಳೆಯರು, ಮಕ್ಕಳು ಆಡಳಿತ ನಡೆಸುವವರ ದೃಷ್ಟಿಯಲ್ಲಿ ಅಪರಾಧಿಗಳಾಗಿದ್ದಾರೆ. ಅಧಿಕಾರ ಸ್ಥಾನದಲ್ಲಿರುವವರು ಜನರನ್ನು ಹಿಂಸಿಸುವುದು ತಮ್ಮ ಕರ್ತವ್ಯವೆಂದು ತಿಳಿದಿದ್ದಾರೆ. ಮುಗ್ಧರನ್ನು ಜೈಲಿನಲ್ಲಿ ಇಡಲಾಗುತ್ತಿದೆ.

ಇಲ್ಲಿ ನನ್ನ ಮಾತನ್ನು ಯಾರು ಕೇಳಿಸಿಕೊಳ್ಳುತ್ತಿದ್ದೀರೊ ನೀವೆಲ್ಲೂ ಕಳೆದುಹೋಗಬಾರದು. ಮಾನಸಿಕ ಹಿಂಸೆ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ. ಭಯದಿಂದ ಓಡುವವರಿಗೆ ಕಹಿ ಅನುಭವಗಳಾಗುತ್ತಿವೆ. ಇದೇ ಇಂದಿನ ಮಾನವ ಅಭಿವೃದ್ಧಿಯ ಸೂಚಕವಾಗಿದೆ.

ಮಾನವ ದ್ವೇಷ ಅಳಿದು, ಸರ್ವಾಧಿಕಾರತ್ವ ನಾಶವಾಗಲಿ. ಅಧಿಕಾರ ವನ್ನು ಜನತೆ ಕೈಗೆತ್ತಿಕೊಳ್ಳಲಿ. ನಾವು ಮಾನವರತ್ತ ಹಿಂದಿರುಗೋಣ. ಜಗತ್ತಿನಲ್ಲಿ ಸ್ವತಂತ್ರ ಮತ್ತು ಮನುಷ್ಯರ ವಯಸ್ಸು ಎರಡೂ ಸಹ ಚಿರಾಯುವಾಗಲಿ.

ಸೈನಿಕರೇ ಅಷಾಢಭೂತಿಗಳಿಗಾಗಿ ನಿಮ್ಮತನವನ್ನು ಬಿಟ್ಟುಕೊಡಬೇಡಿರಿ. ಯಾರು ನಿಮ್ಮನ್ನು ಗುಲಾಮರಂತೆ ನಡೆಸಿಕೊಳ್ಳುತ್ತಾರೊ, ಯಾರು ನಿಮ್ಮನ್ನು ಕಠಿಣ ವ್ಯವಸ್ಥೆಗೆ ಒಳಪಡಿಸುತ್ತಾರೊ, ಯಾರು ನಿಮ್ಮನ್ನು ಅವರು ಹೇಳಿದಂತೆ ಕೇಳಬೇಕೆಂದು ಬಯಸುತ್ತಾರೊ, ಯಾರು ನೀವು ಏನು ಆಲೋಚಿಸಬೇಕೆಂದು ಆದೇಶಿಸುತ್ತಾರೊ, ಕಸರತ್ತಿನ ಹೆಸರಿನಲ್ಲಿ ಯಾರು ನಿಮ್ಮನ್ನು ದಂಡಿಸುತ್ತಾರೊ,ಆಹಾರ ಕ್ರಮದ ಹೆಸರಿನಲ್ಲಿ ನೀವು ಅರೆ ಹೊಟ್ಟೆಯಲ್ಲಿರುವಂತೆ ಯಾರು ಮಾಡುತ್ತಾರೊ, ನಿಮ್ಮನ್ನು ಯಾರು ಪಶುಗಳಂತೆ ಕಾಣುತ್ತಾರೊ, ನಿಮ್ಮನ್ನು ಯಾರು ತೀರ ಯಕಶ್ಚಿತ್ ಎಂದು ಭಾವಿಸುತ್ತಾರೊ ಅವರಿಗಾಗಿ ನಿಮ್ಮತನವನ್ನು ಬಿಟ್ಟುಕೊಡಬೇಡಿರಿ.

ಇಂತಹ ಅಸ್ವಾಭಾವಿಕ ಮನುಷ್ಯರಿಗಾಗಿ, ಯಂತ್ರ ಮಾನವರಿಗಾಗಿ, ಯಾಂತ್ರಿಕ ಮಿದುಳು, ಯಾಂತ್ರಿಕ ಹೃದಯ ಹೊಂದಿದವರಿಗೆ ನೀವು ಯಂತ್ರಗಳಲ್ಲ್ಲ, ನೀವು ಪಶುಗಳಲ್ಲ ಎಂಬುದನ್ನು ನೀವು ಮನುಷ್ಯರು ಎಂಬುದನ್ನು ತೋರಿಸಿರಿ. ನಿಮ್ಮ ಹೃದಯದಲ್ಲಿ ಪ್ರೇಮ ಮತ್ತು ಮಾನವೀಯತೆ ತುಂಬಿಕೊಳ್ಳಲಿ. ನೀವು ಪ್ರೇಮವಿಲ್ಲದಿರುವುದನ್ನು ಮತ್ತು ಅಸ್ವಾಭಾವಿಕತೆಯನ್ನು ದ್ವೇಷಿಸಬೇಕು. ಸೈನಿಕರೆ ಗುಲಾಮಗಿರಿಗಾಗಿ ಯುದ್ಧ ಮಾಡಬೇಡಿ. ಸ್ವಾತಂತ್ರಕ್ಕಾಗಿ ಯುದ್ಧ ಮಾಡಿರಿ.

ಸಂತ ಲ್ಯೂಕ್ ತನ್ನ 17ನೇ ಅಧ್ಯಾಯದಲ್ಲಿ ಬರೆದಂತೆ ದೇವರ ರಾಜ್ಯವು ಮನುಷ್ಯರಿಲ್ಲದೆ ಪೂರ್ಣವಾಗುವುದಿಲ್ಲ. ಅಂದರೆ ಒಬ್ಬ ಮನುಷ್ಯನಲ್ಲ ಅಥವಾ ಮನುಷ್ಯರ ಒಂದು ಗುಂಪಲ್ಲ. ಅಂದರೆ ಜಗತ್ತಿನ ಎಲ್ಲ ಮನುಷ್ಯರು.

ಮನುಷ್ಯರೇ, ನಿಮಗೆ ಅಪಾರವಾದ ಶಕ್ತಿ ಇದೆ. ಶಕ್ತಿಯಿಂದ ಹೇಗೆ ಯಂತ್ರವನ್ನು ಸೃಷ್ಟಿಸಲು ಸಾಧ್ಯವೊ ಹಾಗೆ ಸಂತೋಷವನ್ನು ಸಹ ಸೃಷ್ಟಿಸಬಹುದು.

ಜಗತ್ತಿನ ಎಲ್ಲ ಜನರೆ ಈ ಜೀವನವು ಸರ್ವ ರೀತಿಯಿಂದಲೂ ಮುಕ್ತವಾಗಬೇಕು. ಜೀವವನ್ನು ಸುಂದರ ಸಾಹಸಮಯಗೊಳಿಸಿಕೊಳ್ಳಲು ನಿಮಗೆ ಸಾಧ್ಯವಿದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ನಾವು ನಮ್ಮ ಶಕ್ತಿಯನ್ನು ಬಳಸಿಕೊಳ್ಳೋಣ. ನಾವೆಲ್ಲರೂ ಒಂದಾಗೋಣ. ನಾವೀಗ ಹೊಸ ಜಗತ್ತಿಗಾಗಿ ಹೋರಾಡಬೇಕಿದೆ. ಅದು ಗೊಂದಲವಿಲ್ಲದ ಜಗತ್ತಾಗಬೇಕು. ಅಲ್ಲಿ ಮನುಷ್ಯನಿಗೆ ಮುಕ್ತವಾಗಿ ಕೆಲಸ ಮಾಡುವ ಅವಕಾಶವಿರಬೇಕು. ಯುವ ಜನರಿಗೆ ಭವಿಷ್ಯವನ್ನು ರೂಪಿಸಿಕೊಳ್ಳಲು ಅಲ್ಲಿ ಸಾಧ್ಯವಾಗಬೇಕು. ಅಲ್ಲಿ ವಯೋವೃದ್ಧರಿಗೆ ಜೀವನಭದ್ರತೆಯು ಇರಬೇಕು. ಈ ಭರವಸೆಗಳನ್ನು ನೆಪವಾಗಿಟ್ಟುಕೊಂಡು ಮೂರ್ಖರು ಸಹ ಧ್ವನಿ ಎತ್ತಬಹುದು.ಆದರೆ ಅವರು ಸುಳ್ಳರು. ಅವರು ಭರವಸೆಗಳನ್ನು ಈಡೇರಿಸಲಾರರು. ಸರ್ವಾಧಿಕಾರ ನಾಶವಾಗಿದೆ ಎನ್ನುತ್ತಲೇ ಮನುಷ್ಯರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಾರೆ. ಈಗ ನಾವು ಭರವಸೆಗಳ ಈಡೇರಿಕೆಗಾಗಿ ಒಂದಾಗೋಣ. ಸ್ವತಂತ್ರ ಜಗತ್ತಿಗಾಗಿ ಹೋರಾಡೋಣ. ನಮ್ಮಲ್ಲಿ ರಾಷ್ಟ್ರೀಯ ಪ್ರಜ್ಞೆ ಹುಟ್ಟಲು ತಡೆಯಾಗಿರುವ ಅಂಶಗಳನ್ನು ದಾಟೋಣ.ಲೋಭ, ದ್ವೇಷ, ಅಸಹಾಯಕತೆಗಳನ್ನು ನಿವಾರಿಸುವ ದಾರಿಯನ್ನು ಹುಡುಕೋಣ. ನಾವು ಒಂದು ತಾರ್ಕಿಕ ಜಗತ್ತನ್ನು ನಿರ್ಮಿಸೋಣ.ಅಲ್ಲಿ ವಿಜ್ಞಾನದ ಮೂಲಕ ಪ್ರಗತಿ ಇರಲಿ. ಇದು ಎಲ್ಲ ಮಾನವರನ್ನು ಸಂತೋಷದ ದಾರಿಯಲ್ಲಿ ಮುನ್ನಡೆಸಲಿ.

ಸೈನಿಕರೆ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಾವೆಲ್ಲ ಒಂದಾಗೋಣ.

share
ನವೀನ್ ಮಂಡಗದ್ದೆ
ನವೀನ್ ಮಂಡಗದ್ದೆ
Next Story
X