ವಿಟ್ಲ: ಹೊರೈಝನ್ ಶಾಲೆಯ ಕ್ರೀಡಾ ಕೂಟ

ವಿಟ್ಲ, ಡಿ.20: ಇಲ್ಲಿನ ಮೇಗಿನಪೇಟೆ ಹೊರೈಝನ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟವು ಬುಧವಾರ ಶಾಲಾ ಕ್ರೀಡಾಂಗಣದಲ್ಲಿ ಜರುಗಿತು.
ಶಾಲೆಯ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಹಾನೆಸ್ಟ್ ಕ್ರೀಡಾ ಧ್ವಜಾರೋಹಣಗೈದು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿದರು.
ಶಾಲಾಡಳಿತ ಸಮಿತಿಯ ಉಪಾಧ್ಯಕ್ಷ ಗಫೂರ್ ಮೇಗಿನಪೇಟೆ, ಕಾರ್ಯದರ್ಶಿ ಇಕ್ಬಾಲ್ ಮೇಗಿನಪೇಟೆ, ಜತೆ ಕಾರ್ಯದರ್ಶಿ ಹನೀಫ್ ಎಂ.ಎ., ಮ್ಯಾನೇಜರ್ ವಿ.ಕೆ.ಎಂ.ಅಶ್ರಫ್, ಟ್ರಸ್ಟ್ಟಿಗಳಾದ ಅಶ್ರಫ್ ಮುಹಮ್ಮದ್ ಪೊನ್ನೋಟು, ಸಿದ್ದೀಕ್ ಮಾಲಮೂಲೆ, ಇಕ್ಬಾಲ್ ಹಳೆಮನೆ, ಸುರಕ್ಷಾ ಸಮಿತಿಯ ಅಬೂಬಕರ್ ಅನಿಲಕಟ್ಟೆ, ವಿದ್ಯಾರ್ಥಿ ನಾಯಕಿ ಆಯಿಷಾ ನಿದಾ ವೇದಿಕೆಯಲ್ಲಿದ್ದರು
ಮುಖ್ಯ ಶಿಕ್ಷಕಿ ಚೈತ್ರಾ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
Next Story