ಶಂಕರಪುರದಲ್ಲಿ ‘ಹೈಪಾಯಿಂಟ್ ಎಲೈಟ್’ ಉದ್ಘಾಟನೆ

ಕಾಪು, ಡಿ.20: ಹೈ ಪಾಯಿಂಟ್ ಕಸ್ಟ್ರಕ್ಷನ್ ಪ್ರೈವೆಟ್ ಲಿಮಿಟೆಡ್ ವತಿಯಿಂದ ಶಂಕರಪುರ ಮುಖ್ಯರಸ್ತೆಯ ಸೈಂಟ್ ಜಾನ್ ದಿ ಎವೆಂಜಲಿಸ್ಟ್ ಚರ್ಚ್‌ನ ಎದುರು ನಿರ್ಮಿಸಲಾದ ಸರ್ವಸುಸಜ್ಜಿತ ‘ಹೈಪಾಯಿಂಟ್ ಎಲೈಟ್’ ವಾಣಿಜ್ಯ ಸಂಕಿರ್ಣ ಸಹಿತ ವಸತಿ ಸಮುಚ್ಚಯದ ಉದ್ಘಾಟನೆ ಗುರುವಾರ ನಡೆಯಿತು.
ಕಟಪಾಡಿ ಚೊಕ್ಕಾಡಿ ಮರ್ಕಝ್ ನೂರುಲ್ ಇಸ್ಲಾಮ್ ಜಾಮೀಯ ಮಸೀದಿಯ ಇಮಾಮ್ ಎ.ಹಫೀಝ್ ದುವಾ ನೆರವೇರಿಸಿದರು. ಕಟ್ಟಡದ ಉದ್ಘಾಟನೆಯನ್ನು ಹೈಪಾಯಿಂಟ್ ಕಸ್ಟ್ರಕ್ಷನ್‌ನ ಯುಸೂಫ್ ಪರ್ವೆಝ್‌ರ ತಂದೆ ಶೇಕ್ ಅಬ್ದುಲ್ ಹಮೀದ್ ನೆರವೇರಿಸಿ ಶುಭಹಾರೈಸಿದರು.
ಶಂಕರಪುರ ಚರ್ಚ್‌ನ ಧರ್ಮಗುರು ರೆ.ಫಾ.ಫೆರ್ಡಿನಾಂಡ್ ಗೊನ್ವಾಲಿಸ್ ಆಶೀರ್ವಚನ ನೀಡಿ, ಗ್ರಾಮೀಣ ಪ್ರದೇಶವಾಗಿರುವ ಶಂಕರಪುರದಲ್ಲಿ ನಿರ್ಮಾಣಗೊಂಡಿರುವ ‘ಹೈಪಾಯಿಂಟ್ ಎಲೈಟ್’ ಇಡೀ ಗ್ರಾಮಕ್ಕೆ ಹೊಸ ಕಳೆ ತಂದಿದೆ. ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೇರಿ ಜನರಿಗೆ ಗುಣಮಟ್ಟದ ಸೇವೆ ನೀಡಲಿ ಎಂದು ಹಾರೈಸಿದರು.
ಉಡುಪಿ ಕ್ರೆಡೈ ಅಧ್ಯಕ್ಷ ಜೆರಿ ವಿನ್ಸೆಂಟ್ ಡಯಾಸ್ ಮಾತನಾಡಿ, ಮಲ್ಲಿಗೆ ನಾಡು ಶಂಕರಪುರವನ್ನು ‘ಹೈಪಾಯಿಂಟ್ ಎಲೈಟ್’ ಅಭಿವೃದ್ದಿ ಪಥದತ್ತ ಕೊಂಡೊಯ್ಯುತ್ತಿದೆ. ಬದುಕಿಗೆ ಭದ್ರತೆಯಾಗಿರುವ ಫ್ಲಾಟ್‌ಗಳಿಗೆ ಹೆಚ್ಚಿನ ಬೇಡಿಕೆಗಳು ಬರುತ್ತಿವೆ. ವಿದೇಶದಲ್ಲಿರುವ ಮಕ್ಕಳು ತಮ್ಮ ವೃದ್ಧ ತಂದೆ ತಾಯಿಯ ಸುರಕ್ಷತೆ ದೃಷ್ಟಿಯಿಂದ ಫ್ಲಾಟ್‌ಗಳನ್ನು ಖರೀದಿಸುತ್ತಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಉಡುಪಿ ಎ.ಜಿ.ಅಸೋಸಿಯೇಟ್ಸ್‌ನ ಎಂ.ಗೋಪಾಲ ಭಟ್, ಕುರ್ಕಾಲು ಗ್ರಾಪಂ ಅಧ್ಯಕ್ಷೆ ಶೋಭಾ ಉಪಸ್ಥಿತರಿದ್ದರು. ಯುಸೂಫ್ ಪರ್ವೆಝ್ ಸ್ವಾಗತಿಸಿ ದರು. ಪ್ರೇಮ್ ಕುಮಾರ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
ಒಂದು, ಎರಡು ಹಾಗೂ ಮೂರು ಬಿಎಚ್‌ಕೆಯ ಒಟ್ಟು 24 ಫ್ಲಾಟ್‌ಗಳು ಹಾಗೂ ತಳ ಹಾಗೂ ಮೇಲಂತಸ್ತಿನಲ್ಲಿ ಒಟ್ಟು 14 ವಾಣಿಜ್ಯ ಶಾಪ್‌ಗಳಿವೆ. ಈ ಫ್ಲಾಟ್‌ಗಳನ್ನು ವಾಸ್ತು ಪ್ರಕಾರ ನಿರ್ಮಿಸಿದ್ದು, ದಿನದ 24ಗಂಟೆ ಸೆಕ್ಯುರಿಟಿ ಹಾಗೂ ಸಿಸಿ ಟಿವಿ, ಪ್ರತಿ ಫ್ಲಾಟ್‌ನ ಮುಖ್ಯದ್ವಾರಕ್ಕೆ ಸೆಕ್ಯುರಿಟಿ ವಿಡಿಯೋ ಆಡಿಯೋ ಫೋನ್, ಎಲ್ಲ ಅಪಾರ್ಟ್‌ಮೆಂಟ್‌ಗೆ ಗ್ಯಾಸ್ ಸಂಪರ್ಕ, ಜನರೇಟರ್, ನೀರು, ಲಿಫ್ಟ್, ಪಾರ್ಟಿಗೆ ಹಾಲ್, ಪಾರ್ಕಿಂಗ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.