ಕಲ್ಲಡ್ಕ: ಡಿ.21ರಿಂದ ಮಜ್ಲಿಸುನ್ನೂರ್, ಮತ ಪ್ರಭಾಷಣ
ಬಂಟ್ವಾಳ, ಡಿ. 20: ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಇದರ ಆಶ್ರಯದಲ್ಲಿ ಎಸ್ಕೆಎಸ್ಸೆಸ್ಸೆಫ್ ಕಲ್ಲಡ್ಕ ಶಾಖೆ ವತಿಯಿಂದ ಡಿ.21ರಿಂದ 23ರವರೆಗೆ ರಾತ್ರಿ 8ಕ್ಕೆ ಮಜ್ಲಿಸುನ್ನೂರು ವಾರ್ಷಿಕ ಮತ್ತು 3 ದಿನಗಳ ಮತ ಪ್ರಭಾಷಣವನ್ನು ಕಲ್ಲಡ್ಕ ಮಸೀದಿ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಸೀದಿಯ ಮುದರ್ರಿಸ್ ಇಸ್ಮಾಯಿಲ್ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮಸೀದಿ ಆಡಳಿತ ಅಧ್ಯಕ್ಷ ಜಿ. ಅಬೂಬಕರ್ ಅಧ್ಯಕ್ಷತೆ ವಹಿಸುವರು. ಕೇರಳದ ಪೇರಾಂಬ್ರ ಮಸೀದಿಯ ಖತೀಬ್ ಝೈನುಲ್ ಆಬಿಲ್ ರಹ್ಮಾನಿ ಧಾರ್ಮಿಕ ಪ್ರಭಾಷಣ ಮಾಡುವರು.
ಡಿ. 22ರಂದು ಕೇರಳದ ಮಾನಿಕೋತ್ ಮಸೀದಿಯ ಮಹಿಯುದ್ದೀನ್ ಅಝ್ಹರಿ ಧಾರ್ಮಿಕ ಪ್ರಭಾಷಣ ಮಾಡುರು. ಮಣ್ಣಾರ್‍ಕಾಡ್‍ನ ಸೈಯದ್ ಅಲಿಯಾರ್ ತಂಙಳ್ ಅವರ ನೇತೃತ್ವದಲ್ಲಿ ಮಜ್ಲಿದುನ್ನೂರು ವಾರ್ಷಿಕ ಕಾರ್ಯಕ್ರಮ ನಡೆಯಲಿದೆ ಎಂದು ಕಲ್ಲಡ್ಕ ಜುಮಾ ಮಸೀದಿಯ ಪ್ರಕಟನೆ ತಿಳಿಸಿದೆ.
Next Story