ಡಿ. 23: ಪಡುಬಿದ್ರಿಯಲ್ಲಿ ಕಲಿಕಾ ಕೌಶಲ ಮತ್ತು ಕರಿಯರ್ ಗೈಡನ್ಸ್ ಶಿಬಿರ
ಪಡುಬಿದ್ರಿ, ಡಿ. 20: ಯೂತ್ ಫೌಂಡೇಶನ್ ಪಡುಬಿದ್ರಿ ಇದರ ವತಿಯಿಂದ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗಾಗಿ ಕಲಿಕಾ ಕೌಶಲ ಮತ್ತು ಕರಿಯರ್ ಗೈಡನ್ಸ್ ಶಿಬಿರವು ಡಿ. 23ರಂದು ನಡೆಯಲಿದೆ.
ಪಡುಬಿದ್ರಿಯ ಮಾರ್ಕೆಟ್ ರಸ್ತೆಯ ಸಾಯಿ ಆರ್ಕೆಡ್‍ನಲ್ಲಿ ಮಧ್ಯಾಹ್ನ 2ಗಂಟೆಯಿಂದ ಸಂಜೆ 6ಗಂಟೆಯ ವರೆಗೆ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಕರಿಯರ್ ಗೈಡನ್ಸ್ ಆ್ಯಂಡ್ ಇನ್ಪೋಮೇಶನ್ ಸೆಂಟರ್ ಸ್ಥಾಪಕಾಧ್ಯಕ್ಷ ಹಾಗೂ ಅಂಕಣಕಾರ ಉಮರ್ ಯು.ಎಚ್. ಭಾಗವಹಿಸಲಿದ್ದಾರೆ.
ಪರೀಕ್ಷಾ ಪೂರ್ವ ತಯಾರಿ, ಕಲಿಕಾ ಕೌಶಲ, ಕರಿಯರ್ ಗೈಡನ್ಸ್ ಮಹತ್ವ, ಕರಿಯರ್ ಪ್ಲಾನಿಂಗ್‍ನ ವಿಧಾನ, ಎಸ್‍ಎಸ್‍ಎಲ್‍ಸಿ, ಪಿಯುಸಿ ಬಳಿಕ ಕಲಿಕೆಗಿರುವ ಅವಕಾಶಗಳು, ಕೋರ್ಸ್‍ಗಳು ಹಾಗೂ ಸಿಇಟಿ ಮತ್ತು ನೀಟ್ ಪ್ರವೇಶ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ನಡೆಯಲಿರುವ ಆನ್‍ಲೈನ್ ಕೌನ್ಸಲಿಂಗ್ ವಿಧಾನ, ಹಂತಗಳ ಕುರಿತಂತೆ ಶಿಬಿರದಲ್ಲಿ ಮಾರ್ಗದರ್ಶನ ನೀಡಲಾಗುವುದು.
ಶಿಬಿರದಲ್ಲಿ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಭಾಗವಹಿಸಬಹುದು. ಹೆಚ್ಚಿನ ವಿವರಗಳಿಗೆ 8748882021 ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.