'ಸರಕಾರಿ ವಸತಿ ಯೋಜನೆಗೆ ಮರಳು ಲಭ್ಯ'
ಉಡುಪಿಯಲ್ಲಿ 32 ಮಂದಿಯಿಂದ ಮರಳು ದಿಬ್ಬ ತೆರವು
ಉಡುಪಿ, ಡಿ.20: ಉಡುಪಿ ಜಿಲ್ಲೆಯ ಬ್ರಹ್ಮಾವರ ಮತ್ತು ಉಡುಪಿ ತಾಲೂಕಿನ ಸಿಆರ್‌ಝಡ್ ವ್ಯಾಪ್ತಿಯ ನದಿ ಪಾತ್ರಗಳಲ್ಲಿ ಗುರುತಿಸಿರುವ ಐದು ಮರಳು ದಿಬ್ಬಗಳಲ್ಲಿ ಮರಳನ್ನು ತೆರವು ಗೊಳಿಸಲು ಈಗಾಗಲೇ 36 ಮಂದಿ ಪರವಾನಿಗೆಯನ್ನು ಹಾಗೂ ಸಾಗಾಟ ಪರವಾನಿಗೆಯನ್ನು ಪಡೆದು ಕೊಂಡಿದ್ದಾರೆ ಎಂದು ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಪದ್ಮಜಾ ತಿಳಿಸಿದ್ದಾರೆ.
ಈಗಾಗಲೇ ನಿಗದಿ ಪಡಿಸಿರುವ ಮರಳಿನ ಪ್ರಮಾಣದಲ್ಲಿ ಶೇ.10ರಷ್ಟು ಮರಳನ್ನು ನಿರ್ಮಿತಿ ಕೇಂದ್ರ ನೇಜಾರು ಪ್ರದೇಶದಲ್ಲಿ ನಿರ್ಮಿಸಿರುವ ಸ್ಟಾಕ್ ಯಾರ್ಡ್‌ಗೆ ಹಾಕುವಂತೆ ಮರಳು ಪರವಾನಿಗೆದಾರರಿಗೆ ಸೂಚಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಈಗಾಗಲೇ ನಿಗದಿ ಪಡಿಸಿರುವ ಮರಳಿನ ಪ್ರಮಾಣದಲ್ಲಿ ಶೇ.10ರಷ್ಟು ಮರಳನ್ನು ನಿರ್ಮಿತಿ ಕೇಂದ್ರ ನೇಜಾರು ಪ್ರದೇಶದಲ್ಲಿ ನಿರ್ಮಿಸಿರುವ ಸ್ಟಾಕ್ ಯಾರ್ಡ್‌ಗೆ ಹಾಕುವಂತೆ ಮರಳು ಪರವಾನಿಗೆದಾರರಿಗೆ ಸೂಚಿಸಲಾಗಿದೆ ಎಂದವರು ತಿಳಿಸಿದ್ದಾರೆ. ಇವುಗಳನ್ನು ಕಡಿಮೆ ವರಮಾನದ ಸರಕಾರಿ ವಸತಿ ಯೋಜನೆಯ ಫಲಾನುಭವಿಗಳು ಆಯಾ ಗ್ರಾಪಂ/ನಗರಸಭೆ/ಪುರಸಭೆ ಅಧಿಕಾರಿಗಳಿಂದ ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಮರಳಿನ ಬಗ್ಗೆ ಮನೆ ಮಂಜೂರಾತಿ ಪತ್ರ, ಮನೆ ನಿರ್ಮಾಣದ ನೀಲಿ ನಕಾಶೆ, ಅಧಾರ್ ಕಾರ್ಡ್‌ನೊಂದಿಗೆ ಧೃಡೀಕರಣ ಪತ್ರದೊಂದಿಗೆ 10 ಮೆ.ಟನ್ ಮರಳಿಗೆ 6000 ರೂ.ನಂತೆ ಹಾಗೂ ಮರಳು ಲೋಡಿಂಗ್ ಚಾರ್ಜ್, ಜಿ.ಎಸ್.ಟಿ ಶುಲ್ಕ, ಸಾಗಾಟ ಪರವಾನಿಗೆ ಹಾಳೆಯ ಶುಲ್ಕದೊಂದಿಗೆ ನಿರ್ಮಿತಿ ಕೇಂದ್ರದ ಅಧಿಕಾರಿಗೆ ಸಲ್ಲಿಸಿ, 10 ಮೆ.ಟನ್ ಮರಳನ್ನು ಸ್ಟಾಕ್‌ಯಾರ್ಡ್‌ನಿಂದ ಖನಿಜ ಸಾಗಾಟ ಪರವಾನಿಗೆಯೊಂದಿಗೆ ಪಡೆಯಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಲಾಖೆಯಿಂದ ಮರಳುಗಾರಿಕೆಗೆ ಪರವಾನಿಗೆ ಪಡೆದಿರುವ 36 ಮಂದಿಯಲ್ಲಿ 32ಮಂದಿ ಈಗಾಗಲೇ ಮರಳು ದಿಬ್ಬ ತೆರವು ಕಾರ್ಯ ಪ್ರಾರಂಭಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.