ಉಡುಪಿ ನಗರಸಭೆ: 23ಕ್ಕೆ ಸಾರ್ವಜನಿಕ ಸಮಾಲೋಚನಾ ಕಾರ್ಯಗಾರ
ಉಡುಪಿ, ಡಿ.20: ಅಮೃತ್, ಎಡಿಬಿ ಅನುದಾನದ ನೆರವಿನಲ್ಲಿ ಕ್ವಿಮಿಪ್ ಟ್ರಾಂಚ್-2 ಯೋಜನೆಯಡಿಯಲ್ಲಿ ದಿನದ 24 ಗಂಟೆ ಕುಡಿಯುವ ನೀರು ಒದಗಿಸುವ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಮತ್ತು ಯೋಜನೆ ಅನುಷ್ಟಾನದಿಂದಾಗುವ ಸಾಮಾಜಿಕ ಪರಿಣಾಮಗಳ ಬಗ್ಗೆ ಅಭಿಪ್ರಾಯ ಪಡೆಯಲು ಡಿ.22ರ ಬೆಳಗ್ಗೆ 11:30ಕ್ಕೆ ಉಡುಪಿ ನಗರ ಸಭಾ ಕಚೇರಿಯ ಸತ್ಯಮೂರ್ತಿ ಸಭಾಭವನದಲ್ಲಿ ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಕಾರ್ಯಗಾರವನ್ನು ನಡೆಸಲಾಗುವುದು.
ಈ ಕಾರ್ಯಕ್ರಮದಲ್ಲಿ ನಗರಸಭಾ ವ್ಯಾಪ್ತಿಯ ತೆಂಕಪೇಟೆ, ಶಿರಿಬೀಡು ವಾರ್ಡ್‌ಗಳಿಗೆ ಹಾಗೂ ಅಪರಾಹ್ನ 3:30ಕ್ಕೆ ಕಡಿಯಾಳಿ ಶಾಲೆಯಲ್ಲಿ ಕುಂಜಿಬೆಟ್ಟು, ಕಡಿಯಾಳಿ, ಗುಂಡಿಬೈಲು ವಾರ್ಡ್‌ಗಳಿಗೆ ಕೆಯುಐಡಿಎಫ್‌ಸಿ ಹಾಗೂ ಉಡುಪಿ ನಗರಸಭೆಯ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ರ್ಯಾಗಾರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಗರಸಭಾ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story