ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ನಮಾಝ್ ಗೆ ಅವಕಾಶ ಕೋರಿದ ಅರ್ಜಿ ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್

ಲಕ್ನೊ, ಡಿ. 20: ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ನಮಾಝ್ ಸಲ್ಲಿಸಲು ಅವಕಾಶ ನೀಡುವಂತೆ ಕೋರಿ ಸಲ್ಲಿಸಿದ ಮನವಿಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.
ಅಗ್ಗದ ಪ್ರಚಾರಕ್ಕಾಗಿ ಇಂತಹ ಮನವಿಗಳನ್ನು ಸಲ್ಲಿಸಲಾಗುತ್ತಿದೆ ಎಂದು ಹೇಳಿರುವ ನ್ಯಾಯಾಲಯ ದೂರುದಾರನಿಗೆ 5 ಲಕ್ಷ ರೂ. ದಂಡ ವಿಧಿಸಿದೆ. ವಿವಾದಿತ ಸ್ಥಳದಲ್ಲಿ ನಮಾಝ್ ಮಾಡಲು ಅವಕಾಶ ನೀಡುವಂತೆ ಕೋರಿ ಅಲ್ ರೆಹ್ಮಾನ್ ಟ್ರಸ್ಟ್ ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿ ಡಿ.ಕೆ. ಅರೋರಾ ಹಾಗೂ ಅಲೋಕ್ ಮಾಥುರ್ ಅವರನ್ನು ಒಳಗೊಂಡ ಲಕ್ನೊ ಪೀಠಿ ತಿರಸ್ಕರಿಸಿದೆ.
ಟ್ರಸ್ಟ್ ದಂಡ ಪಾವತಿಸದೇ ಇದ್ದರೆ, ಇದರ ಬಗ್ಗೆ ಮನವರಿಕೆ ಮಾಡಿಕೊಂಡುವಂತೆ ಫಾಝಿಯಾಬಾದ್‌ನ ಜಿಲ್ಲಾ ದಂಡಾಧಿಕಾರಿಗೆ ನ್ಯಾಯಾಲಯ ಸೂಚಿಸಿದೆ.
Next Story





