ಭಾರತೀಯ ಯುವ ಕಾಂಗ್ರೆಸ್ ಯಾತ್ರೆಗೆ ಅದ್ಧೂರಿ ಸ್ವಾಗತ

ಬೆಂಗಳೂರು, ಡಿ.20: ಕೇಂದ್ರ ಸರಕಾರದ ವೈಫಲ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಭಾರತೀಯ ಯುವ ಕಾಂಗ್ರೆಸ್ ವತಿಯಿಂದ ಡಿ.16 ರಿಂದ 2019ರ ಜ.30ರವರೆಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿರುವ ಜಾಗೃತಿ ಯಾತ್ರೆ ಇಂದು(ಗುರುವಾರ) ಬೆಂಗಳೂರು ಪ್ರವೇಶಿಸಿತು.
ಕೇಂದ್ರ ಸರಕಾದ ವೈಫಲ್ಯತೆಗಳನ್ನು, ಸುಳ್ಳು ಭರವಸೆಗಳನ್ನು ಮತ್ತು ಜನ ವಿರೋಧಿ ನೀತಿಗಳನ್ನು ಸಾರ್ವಜನಿಕರಿಗೆ ತಿಳಿಪಡಿಸುವುದು ಯಾತ್ರೆಯ ಉದ್ದೇಶವಾಗಿದ್ದು, ಇಂದು ಬೆಂಗಳೂರಿಗೆ ಪ್ರವೇಶಿಸಿದ ಕಾಂಗ್ರೆಸ್ ಯುವ ಯಾತ್ರೆಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ವಾಗತಿಸಿದರು.
ಭಾರತೀಯ ಯುವ ಕಾಂಗ್ರೆಸ್ ಉಸ್ತುವಾರಿ ಕೃಷ್ಣ ಅಳ್ವಾರ್, ಸಮಿತಿ ಅಧ್ಯಕ್ಷ ಕೇಶವ್ ಚಂದ್ ಯಾದವ್, ಉಪಾಧ್ಯಕ್ಷ ಶ್ರೀನಿವಾಸ್ ಬಿ.ವಿ. ಹಾಗೂ ಇತರೆ ಹಿರಿಯ ಕಾಂಗ್ರೆಸ್ ನಾಯಕರು ಯಾತ್ರೆಯಲ್ಲಿ ಆಗಮಿಸಿದ್ದರು. ಇದೇ ವೇಳೆ ಭಾರತೀಯ ಯುವ ಕಾಂಗ್ರೆಸ್ ಯಾತ್ರೆಗೆ ಸ್ವಾಗತ ಹಾಗೂ ಶುಭ ಕೋರುವುದಕ್ಕಾಗಿ ನಗರದ ಆನಂದರಾವ್ ವೃತ್ತದ ಕಾಂಗ್ರೆಸ್ ಭವನ ಹಿಂಭಾಗದ ಆವರಣದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.