ನಕಲಿ ಸಹಿ ಆರೋಪ: ಯುವಕರಿಬ್ಬರ ಬಂಧನ

ಬೆಂಗಳೂರು, ಡಿ.20: ಆರ್‌ಟಿಒ ಅಧಿಕಾರಿಯೊಬ್ಬರ ಸಹಿ ಅನ್ನು ನಕಲಿ ಮಾಡುತ್ತಿದ್ದ ಆರೋಪದಡಿ ಯುವಕರಿಬ್ಬರನ್ನು ಕೋರಮಂಗಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆನಂದ್ ಹಾಗೂ ಇಲ್ಯಾಸ್ ಪಾಷಾ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು 10ನೆ ತರಗತಿ ವ್ಯಾಸಂಗ ಮಾಡಿದ್ದು, ಇಲ್ಲಿನ ಶಾಂತಿನಗರದ ಆರ್‌ಟಿಒ ಅಧಿಕಾರಿಯ ಸಹಿಯನ್ನು ನಕಲಿ ಮಾಡಿಕೊಂಡು, ನೋಂದಣಿ ಆದ ಹೊಸ ಆಟೊಗಳಿಗೆ ಪರವಾನಗಿ ನೀಡುವ ಸಂಬಂಧ ಸುಲಿಗೆ ದಂಧೆ ನಡೆಸುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತರಿಂದ 7 ಹೊಸ ಆಟೊ ಹಾಗೂ ನಕಲಿ ದಾಖಲೆಗಳನ್ನು ಜಪ್ತಿ ಮಾಡಿ, ಇಲ್ಲಿನ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
Next Story





