ಅಕ್ರಮ ಮರಳುಗಾರಿಕೆಗೆ ದಾಳಿ: ಮರಳು, ದೋಣಿ, ವಾಹನ ವಶ
ಕುಂದಾಪುರ, ಡಿ.20: ಬೇಳೂರು ಗ್ರಾಮದ ದೇಳೆಟ್ಟು ಎಂಬಲ್ಲಿರುವ ಬೇಳೂರು ಹೊಳೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಮರಳು, ದೋಣಿ ಹಾಗೂ ವಾಹನಗಳನ್ನು ವಶಪಡಿಕೊಂಡಿದೆ.
ಖಚಿತ ಮಾಹಿತಿಯಂತೆ ಉಡುಪಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಮಹೇಶ್ ನೇತೃತ್ವದಲ್ಲಿ ಕೋಟ ಪೊಲೀಸರು, ಬೇಳೂರು ಪಿಡಿಓ ಹಾಗೂ ಗ್ರಾಮ ಕರಣಿಕರ ತಂಡ ದಾಳಿ ನಡೆಸಿದ್ದು, ಈ ವೇಳೆ ಮರಳುಗಾರಿಕೆ ನಡೆಸುತ್ತಿದ್ದ ಹಲವು ಮಂದಿ ಪರಾರಿಯಾಗಿದ್ದಾ ರೆನ್ನಲಾಗಿದೆ.
ಸ್ಥಳದಲ್ಲಿದ್ದ 12 ಮೆಟ್ರಿಕ್ ಟನ್ ಮರಳು, ಒಂದು ದೋಣಿ, ಒಂದು ಕಾರು, ಒಂದು 407 ಟೆಂಪೊವನ್ನು ತಂಡ ವಶಪಡಿಸಿಕೊಂಡಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಆರೋಪಿಗಳ ವಿರುದ್ಧ ನಾಳೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲಾಗುವುದು ಎಂದು ಭೂವಿಜ್ಞಾನಿ ಮಹೇಶ್ ಪತ್ರಿಕೆಗೆ ತಿಳಿಸಿದ್ದಾರೆ.
Next Story