ಬ್ಯಾಂಕ್ ಖಾತೆಗೆ ಕನ್ನ: ಸಾವಿರಾರು ರೂ. ವಂಚನೆ
ಉಡುಪಿ, ಡಿ.20: ಅಪರಿಚಿತರು ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಸಾವಿರಾರು ರೂ. ಡ್ರಾ ಮಾಡಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಸಂತೆಕಟ್ಟೆಯ ಕಕ್ಕುಂಜೆ ರಸ್ತೆ ನಿವಾಸಿ ಫ್ಲಾವೀಯಾ ಡಯಾಸ್ ಜೀಯಾನ್ ಎಂಬವರು ಉಡುಪಿ ಪುತ್ತೂರು ಎಂಬಲ್ಲಿರುವ ವಿಜಯ ಬ್ಯಾಂಕಿ ನಲ್ಲ್ಲಿ ಉಳಿತಾಯ ಖಾತೆ ಹೊಂದಿದ್ದು, ಡಿ.16ರಂದು ರಾತ್ರಿ ವೇಳೆ ಅವರ ಬ್ಯಾಂಕ್ ಖಾತೆಯಿಂದ ಸುಮಾರು 16 ಬಾರಿ ಒಟ್ಟು 77058.72ರೂ. ಮೋಸದಿಂದ ಡ್ರಾ ಮಾಡಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.
Next Story