ವ್ಯಾಯಾಮ ತರಬೇತುದಾರರಿಗೆ ಕ್ರೀಡಾಭಿವೃದ್ಧಿ ಅಕಾಡೆಮಿಯಿಂದ ದೃಢೀಕರಣ ಪತ್ರ: ತಹಸಿನ್ ಝಹೀದ್
ಬೆಂಗಳೂರು, ಡಿ.20: ಕ್ರೀಡಾಭಿವೃದ್ಧಿ ಅಕಾಡೆಮಿ ವತಿಯಿಂದ ವ್ಯಾಯಾಮ ತರಬೇತುದಾರರಿಗೆ ದೃಢೀಕರಣ ಪತ್ರ ಒದಗಿಸಲು ರೆಕಾಗ್ನಿಷನ್ ಆಫ್ ಪ್ರಿಯಾರ್ ಲರ್ನಿಂಗ್ ಸರ್ಟಿಫಿಕೇಟ್ ಪ್ರೋಗ್ರಾಮ್ ಯೋಜನೆಯನ್ನು ರೂಪಿಸಲಾಗಿದೆ ಎಂದು ಅಕಾಡೆಮಿಯ ತಹಸಿನ್ ಝಹೀದ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯನ್ನು ಕ್ರೀಡೆ ದೈಹಿಕ ಶಿಕ್ಷಣ ವಿರಾಮ ಕೌಶಲ್ಯ ವಿಭಾಗದವರು ಆಯೋಜಿಸಿದ್ದಾರೆ. ಇ ಸ್ಪೋರ್ಟ್ಸ್ ಅಚೀವರ್ ಸಂಸ್ಥೆಯೂ ಸಹಭಾಗಿತ್ವ ಹೊಂದಿದೆ. ಅಲ್ಲದೆ, ಯೋಜನೆಯಡಿ ಎಲ್ಲಾ ಕ್ರೀಡಾ ಮತ್ತು ವ್ಯಾಯಾಮ ತರಬೇತುದಾರರಿಗೆ ಭಾರತ ಸರಕಾರದಿಂದ ಪ್ರಮಾಣ ಪತ್ರ ಪಡೆಯುವ ಅವಕಾಶವಿದೆ ಎಂದು ಹೇಳಿದರು.
ಈ ಸ್ವ- ಕಲಿಕೆಯ ಪ್ರಮಾಣ ಪತ್ರದಿಂದಾಗಿ ಅಭ್ಯಾಸ ಸಮಯದಲ್ಲಿ ಅಪಘಾತಗಳಾಗುವುದನ್ನು ನಿಯಂತ್ರಿಸಬಹುದ್ದಾಗಿದ್ದು ತರಬೇತುದಾರರ ಮೇಲೆ ಗ್ರಾಹಕರಿಗೆ ಆತ್ಮವಿಶ್ವಾಸ ಮೂಡಿಸಲು ಇದು ಸಹಕಾರಿಯಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 70191 23446 ಅನ್ನು ಸಂಪರ್ಕಿಸಬಹುದು ಎಂದರು.
Next Story





