ಡ್ರೋನ್‌ಗಳ ಹಾರಾಟ: ಲಂಡನ್ ವಿಮಾನ ನಿಲ್ದಾಣ ಬಂದ್

ಲಂಡನ್, ಡಿ. 20: ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣದ ವಾಯುಕ್ಷೇತ್ರದಲ್ಲಿ ಡ್ರೋನ್‌ಗಳು ಹಾರಾಟ ನಡೆಸುತ್ತಿದ್ದವು ಎಂಬ ವರದಿಗಳ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ.
ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ತಮ್ಮ ವಿಮಾನಗಳ ಸ್ಥಿತಿಗತಿಯನ್ನು ಪರಿಶೀಲಿಸುವಂತೆ ಗುರುವಾರ ಪ್ರಯಾಣಿಸುವ ಪ್ರಯಾಣಿಕರಿಗೆ ಸೂಚನೆ ನೀಡಲಾಗಿದೆ.
ಡ್ರೋನ್‌ಗಳು ಬುಧವಾರ ರಾತ್ರಿ ಗೋಚರಿಸಿದಾಗ ಸುಮಾರು ರಾತ್ರಿ 9 ಗಂಟೆಯ ವೇಳೆಗೆ ವಿಮಾನ ನಿಲ್ದಾಣವನ್ನು ಮೊದಲು ಮುಚ್ಚಲಾಯಿತು.
ಗುರುವಾರ ಮುಂಜಾನೆ 3 ಗಂಟೆಗೆ ವಿಮಾನ ನಿಲ್ದಾಣ ತೆರೆಯಿತು. ಆದರೆ, ಡ್ರೋನ್‌ಗಳು ಮತ್ತೆ ಕಾಣಿಸಿಕೊಂಡಾಗ 45 ನಿಮಿಷಗಳಲ್ಲಿ ಮತ್ತೆ ಮುಚ್ಚಲಾಯಿತು.
Next Story





