ಬಾಂಗ್ಲಾದೇಶದ ಭಾರತೀಯ ಹೈಕಮಿಷನರ್ ಆಗಿ ರಿವಾ ಗಂಗೂಲಿ ದಾಸ್ ನೇಮಕ
ಹೊಸದಿಲ್ಲಿ, ಡಿ. 20: ಪ್ರಸ್ತುತ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ (ಐಸಿಸಿಆರ್)ನ ಪ್ರಧಾನ ನಿರ್ದೇಶಕರಾಗಿರುವ ರಿವಾ ಗಂಗೂಲಿ ದಾಸ್ ಅವರನ್ನು ಬಾಂಗ್ಲಾದೇಶಕ್ಕಿರುವ ಭಾರತದ ನೂತನ ಹೈ ಕಮಿಷನರ್ ಆಗಿ ಗುರುವಾರ ನೇಮಕ ಮಾಡಲಾಗಿದೆ.
ಭಾರತೀಯ ಅರಣ್ಯ ಸೇವೆಯ 1986ನೇ ಬ್ಯಾಚ್‌ನ ಅಧಿಕಾರಿಯಾಗಿರುವ ರಿವಾ ಗಂಗೂಲಿ ದಾಸ್ ಅವರು ಶೀಘ್ರದಲ್ಲಿ ಅಧಿಕಾರ ಸ್ವೀರಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ. ರಿವಾ ಗಂಗೂಲಿ ದಾಸ್ ಅವರು ಅಮೆರಿಕದ ನೂತನ ರಾಯಭಾರಿಯಾಗಿ ನಿಯೋಜಿತರಾಗಿರುವ ಹರ್ಷವರ್ಧನ್ ಶ್ರಿಂಗ್ಲಾ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ದಿಲ್ಲಿ ವಿಶ್ವವಿದ್ಯಾನಿಲಯದ ರಾಜಕೀಯ ಶಾಸ್ತ್ರದ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದ ದಾಸ್ ಐಎಫ್‌ಎಸ್ ಸೇರುವ ಮುನ್ನ ದಿಲ್ಲಿ ವಿ.ವಿ.ಯಲ್ಲಿ ಉಪನ್ಯಾಸಕರಾಗಿದ್ದರು.
Next Story