ಸಮಾಜದ ಅಭಿವೃದ್ಧಿ ಯಲ್ಲಿ ಜನಪ್ರತಿನಿಧಿಗಳ ಪಾತ್ರ ಪ್ರಮುಖ: ಉಸ್ಮಾನ್ ಸಅದಿ ಪಟ್ಟೋರಿ

ಕೊಣಾಜೆ, ಡಿ. 20: ಜನಪ್ರತಿನಿಧಿಗಳು ಸಮಾಜದಲ್ಲಿ ಶಾಂತಿ ಸಾಮರಸ್ಯದೊಂದಿಗೆ ಪ್ರತಿಯೊಬ್ಬರ ಕಷ್ಟ ದುಃಖಗಳಲ್ಲಿ ಭಾಗಿಯಾಗಬೇಕು. ಸಮಾಜದ ಬೆಳವಣಿಗೆಯಲ್ಲಿ ಜನಪ್ರತಿನಿಧಿಗಳ ಪಾತ್ರ ಪ್ರಮುಖವಾಗಿದೆ ಎಂದು ಅಲ್ ಸಬೀಲ್ ಸಂಸ್ಥೆಯ ಉಸ್ಮಾನ್ ಸಅದಿ ಪಟ್ಟೋರಿ ಅವರು ಹೇಳಿದರು.
ಅವರು ಮಂಗಳೂರಿನ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ನಡೆದ ಹಜ್ ಹಾಗೂ ಉಮ್ರಾ ಯಾತ್ರಿಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ಕೊಣಾಜೆ ಪಂಚಾಯಿತಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ನಝರ್ ಷಾ ಪಟ್ಟೋರಿ ಅವರಿಗೆ ಸನ್ಮಾನಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಸೈಯ್ಯದ್ ಅಬ್ದುಸ್ಸಲಾಂ ತಂಞಳ್, ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಹಂಝ ನಾಝಿಕ್, ಮುಫೀಝ್ ಮುಸ್ತಾಕ್, ಲತೀಫ್ ಮದನಿ ಕಲ್ಲಡ್ಕ, ಮುಫಿಯಾ ಮುಸ್ತಾಖ್, ನಝೀರ್ ಮೊದಲಾದವರು ಉಪಸ್ಥಿತರಿದ್ದರು.
Next Story