ಹನೂರು ವಿಷ ಪ್ರಸಾದ ಪ್ರಕರಣ: ಆಸ್ಪತ್ರೆಯಿಂದ ರೋಗಿಗಳ ಬಲವಂತದ ಬಿಡುಗಡೆ; ಆರೋಪ
ಚಾಮರಾಜನಗರ,ಡಿ.20: ಸುಳ್ವಾಡಿ ಮಾರಮ್ಮ ದುರಂತ ಪ್ರಕರಣದಲ್ಲಿ ಅಸ್ವಸ್ಥರಾಗಿದ್ದ ರೋಗಿಗಳನ್ನು ಖಾಸಗಿ ಆಸ್ಪತ್ರೆ ಬಲವಂತವಾಗಿ ಬಿಡುಗಡೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸುಳ್ವಾಡಿ ಕಿಚ್ಚಗುತ್ತಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ 15 ಜನರು ಸಾವನ್ನಪ್ಪಿ 100 ಕ್ಕೂ ಜನರು ಅಸ್ವಸ್ಥರಾಗಿದ್ದರು. ಘಟನೆಯಲ್ಲಿ ತೀವ್ರ ಅಸ್ವಸ್ಥರಾಗಿದ್ದ ರೋಗಿಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು.
ಈ ಪೈಕಿ ತೀವ್ರವಾಗಿ ಅಸ್ವಸ್ಥರಾಗಿದ್ದ ದೊರೆಸ್ವಾಮಿ ಮೇಡು ಗ್ರಾಮದ ಆರ್ಯೆ (55) ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈಕೆ ಇನ್ನೂ ಗುಣಮುಖವಾಗಿಲ್ಲ ಹಾಗೂ ಸುಸ್ತು, ಹೊಟ್ಟೆನೋವು ಇದೆ ಎಂದರೂ ಕೂಡ ಆಸ್ಪತ್ರೆ ಸಿಬ್ಬಂದಿಗಳು ಬಲವಂತವಾಗಿ ಡಿಸ್ಟಾರ್ಜ್ ಮಾಡಿದ್ದಾರೆ ಎನ್ನಲಾಗಿದೆ.
ಬುಧವಾರ ರಾತ್ರಿ ಗ್ರಾಮಕ್ಕೆ ಹಿಂತಿರುಗಿದ ಮಹಿಳೆ ತೀವ್ರ ಅಸ್ವಸ್ಥರಾಗಿದ್ದು, ಕುಟುಂಬದವರು ಆತಂಕಗೊಂಡು ಸ್ಥಳಿಯ ಸರ್ಕಾರಿ ಆಸ್ಪತ್ರೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.





