ಮಡಿಕೇರಿ: ಪತ್ನಿಯ ಸಾವಿನಲ್ಲಿ ಅಂತ್ಯ ಕಂಡ ದಂಪತಿ ನಡುವಿನ ಜಗಳ

ಮಡಿಕೇರಿ, ಡಿ.20: ದಂಪತಿ ನಡುವಿನ ಕಲಹ ವಿಕೋಪಕ್ಕೆ ತಿರುಗಿ ಪತಿಯಿಂದಲೇ ಪತ್ನಿ ಸಾವಿಗೀಡಾಗಿರುವ ಘಟನೆ ಮಡಿಕೇರಿ ನಗರದ ಸ್ಟುವರ್ಟ್ ಹಿಲ್ ಬಡಾವಣೆಯಲ್ಲಿ ನಡೆದಿದೆ.
ಮಾಜಿ ಸೈನಿಕ ಗುತ್ತಿಮುಂಡನ ಪೂಣಚ್ಚ ಎಂಬವರ ಪತ್ನಿ ಉಷಾ(45) ಮೃತ ಮಹಿಳೆ. ಪತಿ-ಪತ್ನಿ ನಡುವೆ ನಿರಂತರ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದ್ದು, ರಾತ್ರಿ ಇದು ವಿಕೋಪಕ್ಕೆ ತಿರುಗಿ ಪೂಣಚ್ಚ ಕಬ್ಬಿಣದ ಪೈಪ್‍ನಿಂದ ತೀವ್ರವಾಗಿ ಹಲ್ಲೆ ನಡೆಸಿದ ಪರಿಣಾಮ ರಕ್ತಸ್ರಾವದಿಂದ ಉಷಾ ಕುಸಿದು ಬಿದ್ದಿದ್ದಾರೆ. ಕೂಡಲೇ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿ ಮಧ್ಯೆ ಉಷಾ ಅಸುನೀಗಿದ್ದಾರೆ. ಪತಿ ಪೂಣಚ್ಚನನ್ನು ನಗರ ಪೊಲೀಸರು ಬಂಧಿಸಿದ್ದಾರೆ. ದಂಪತಿಗೆ ಮಕ್ಕಳಿರಲಿಲ್ಲ.
ಮೊಕದ್ದಮೆ ದಾಖಲಿಸಿಕೊಂಡಿರುವ ಮಹಿಳಾ ಠಾಣಾಧಿಕಾರಿ ಅಚ್ಚಮ್ಮ ಹಾಗೂ ಡಿವೈಎಸ್ಪಿ ಸುಂದರ್ ರಾಜ್, ಸರ್ಕಲ್ ಇನ್ಸ್ ಪೆಕ್ಟರ್ ಅನೂಪ್ ಮಾದಪ್ಪ ನೇತೃತ್ವದಲ್ಲಿ ಮಹಜರು ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
Next Story





