ಪ್ರೊ ಕಬಡ್ಡಿ: ಟೈಗೆ ತೃಪ್ತಿಪಟ್ಟ ಪಿಂಕ್ ಫ್ಯಾಂಥರ್ಸ್-ದಿಲ್ಲಿ
ಪಂಚಕುಲ, ಡಿ.20: 6ನೇ ಋತುವಿನ ಪ್ರೊ ಕಬಡ್ಡಿ ಟೂರ್ನಿಯ ದಬಾಂಗ್ ದಿಲ್ಲಿ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ನಡುವಿನ ಪಂದ್ಯ 37-37 ಸಮಾನ ಅಂಕಗಳಿಂದ ಟೈನಲ್ಲಿ ಅಂತ್ಯಕಂಡಿದೆ.
ಇಲ್ಲಿನ ತವು ದೇವಿಲಾಲ್ ಕ್ರೀಡಾ ಸಂಕೀರ್ಣದಲ್ಲಿ ನಡೆದ ಪಂದ್ಯದಲ್ಲಿ ದಬಾಂಗ್ ಪರ ಚಂದ್ರನ್ ರಂಜಿತ್ ಅತ್ಯಧಿಕ 11 ಅಂಕಗಳನ್ನು ಮಿಂಚಿದರು. ಅವರಿಗೆ ಉತ್ತಮ ಸಾಥ್ ನೀಡಿದ ಪವನ್‌ಕುಮಾರ್ 9 ಹಾಗೂ ಮೆರಾಜ್ ಶೇಕ್ 6 ಅಂಕಗಳನ್ನು ಗಳಿಸಿದರು. ಜೈಪುರ ಪಿಂಕ್ ಪ್ಯಾಂಥರ್ಸ್ ಪರ ಸೆಲ್ವಮಣಿ ಕೆ. 11 ಅಂಕ, ದೀಪಕ್ ಹೂಡ 8 ಹಾಗೂ ಅಂಜಿಕ್ಯ ಪವಾರ್ 7 ಅಂಕಗಳನ್ನು ಗಳಿಸಿದರು.
Next Story





