ಪಂಜ: ಅಡಿಕೆ ಮರ ಮೈಮೇಲೆ ಬಿದ್ದು ಓರ್ವ ಮೃತ್ಯು
ಕಾಯಂಬಾಡಿ ದೇವಸ್ಥಾನದಲ್ಲಿ ಶ್ರಮದಾನ

ಸುಬ್ರಹ್ಮಣ್ಯ, ಡಿ. 21. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಶ್ರಮದಾನ ಮಾಡುತ್ತಿದ್ದಾಗ ಅಡಿಕೆ ಮರ ಬಿದ್ದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಠಾಣೆ ವ್ಯಾಪ್ತಿಯ ಪಂಜ ಸಮೀಪದ ಕಾಯಂಬಾಡಿಯಲ್ಲಿ ಶುಕ್ರವಾರ ನಡೆದಿದೆ.
ಮೃತರನ್ನು ಕೇನ್ಯ ಗ್ರಾಮದ ಕಾಯಂಬಾಡಿ ನಿವಾಸಿ ಚೆನ್ನಪ್ಪ ಗೌಡ (60) ಎಂದು ಗುರುತಿಸಲಾಗಿದೆ.
ಕಾಯಂಬಾಡಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕಾಗಿ ಮರ ಕಡಿಯುತ್ತಿದ್ದ ವೇಳೆ ಅಡಿಕೆ ಮರ ಚೆನ್ನಪ್ಪ ಗೌಡರ ಮೈ ಮೇಲೆ ಬಿದ್ದಿದ್ದು, ಗಂಭೀರ ಗಾಯಗೊಂಡ ಚೆನ್ನಪ್ಪ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸುಬ್ರಹ್ಮಣ್ಯ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story