ಕಿನ್ಯ: ದ್ಸಿಕ್ರ್ , ಮುಹಿಯ್ಯುದ್ದೀನ್ ರಾತೀಬ್

ಮಂಗಳೂರು, ಡಿ.21: ಧಾರ್ಮಿಕ ಆಚಾರದಲ್ಲಿ ಭಿನ್ನತೆ ಕಲ್ಪಿಸದೆ ಆಚಾರ ವಿಚಾರಗಳನ್ನು ಬೆಳೆಸಿಕೊಳ್ಳಬೇಕು. ಫೇಸ್‌ಬುಕ್ ವಾಟ್ಸ್‌ಆ್ಯಪ್ ಇಸ್ಲಾಮ್‌ನ ಮೂಲವಲ್ಲ ಎಂದು ಸೈಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಹೇಳಿದರು.
ಕಿನ್ಯ ಬದ್ರಿಯಾನಗರದ ಬುಖಾರಿ ಜುಮಾ ಮಸೀದಿಯ ಆಶ್ರಯದಲ್ಲಿ ಗುರುವಾರ ನಡೆದ ದ್ಸಿಕ್ರ್ ಮತ್ತು ಮುಹಿಯ್ಯುದ್ದೀನ್ ರಾತೀಬ್ ಕಾರ್ಯಕ್ರಮದಲ್ಲಿ ಅವರು ಉದ್ಭೋದನೆ ನೀಡಿದರು.
ಸೈಯದ್ ಸೈದಲವಿ ತಂಙಳ್ ಕಿನ್ಯ ದುಆಗೈದರು. ಬುಖಾರಿ ಮಸೀದಿಯ ಅಧ್ಯಕ್ಷ ಮುಹಮ್ಮದ್ ಅಲಿ ಸಖಾಫಿ ಸುರಿಬೈಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಉಸ್ಮಾನ್ ಸಖಾಫಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಅಬ್ಬಾಸ್ ಹಾಜಿ ನಾಟೆಕಲ್, ಕೆ.ಎಸ್. ಅಹ್ಮದ್ ಕುಂಞಿ , ಅಶ್ರಫ್ ಹಾಜಿ ಮದೀನ, ಕಿನ್ಯ ಗಾಪಂ ಸದಸ್ಯ ಫಾರೂಕ್, ಉಪಾಧ್ಯಕ್ಷ ಸಿರಾಜುದ್ದೀನ್, ಇಸ್ಮಾಯೀಲ್ ಕಿನ್ಯ, ಮೂಸಾ ಕಿನ್ಯ ಉಪಸ್ಥಿತರಿದ್ದರು. ಕೆ.ಎಚ್. ಇಸ್ಮಾಯೀಲ್ ಸಅದಿ ಸ್ವಾಗತಿಸಿದರು. ಅಬ್ಬಾಸ್ ಹಾಜಿ ವಂದಿಸಿದರು.
Next Story