ಡಿ. 28ರಂದು ಪ್ರಬಂಧ-ಚರ್ಚಾ ಸ್ಪರ್ಧೆ
ಉಡುಪಿ, ಡಿ.21: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ವತಿಯಿಂದ ಉಡುಪಿ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಉಡುಪಿ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಡಿ.28ರಂದು ಬೆಳಗ್ಗೆ 10.15ಕ್ಕೆ ಪ್ರಬಂಧ ಸ್ಪರ್ಧೆ(ಸಹಕಾರ ಚಳುವಳಿ ಮತ್ತು ಸಾಮಾಜಿಕ ಹೊಣೆಗಾರಿಕೆ) ಹಾಗೂ ಬೆಳಗ್ಗೆ 10.30ಕ್ಕೆ ಚರ್ಚಾ ಸ್ಪರ್ಧೆ(ಸಹಕಾರ ವ್ಯವಸ್ಥೆ ಕಾಲಕಾಲಕ್ಕೆ ಬದಲಾದ ತಾಂತ್ರಿಕತೆಗೆ ಹಾಗೂ ಸುಧಾರಣೆಗಳಿಗೆ ಸಿದ್ದವಾಗದಿರು ವುದೇ ವ್ಯವಸ್ಥೆಯ ವೈಪಲ್ಯಕ್ಕೆ ಕಾರಣವಾಗಿದೆ) ನಡೆಯಲಿದೆ.
ಜಿಲ್ಲಾ ಮಟ್ಟದ ಪ್ರಬಂಧ ಸ್ಫರ್ಧೆಯಲ್ಲಿ ವಿಜೇತರಾದ ಮೂವರು ಹಾಗೂ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ಇಬ್ಬರು ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಬಸ್ ಪ್ರಯಾಣ ದರ, ಊಟ -ಉಪಹಾರದ ವೆಚ್ಚವನ್ನು ನೀಡಲಾಗುವುದು.
ಭಾಗವಹಿಸುವ ವಿದ್ಯಾರ್ಥಿಗಳ ಶಿಫಾರಸ್ಸು ಪತ್ರವನ್ನು ಡಿ.27ರೊಳಗೆ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ಟಿ.ಎ.ಪಿ.ಸಿ.ಎಂ.ಎಸ್. ಕಟ್ಟಡ, ಪಿಪಿಸಿ ರಸ್ತೆ, ಉಡುಪಿ- 576101 ವಿಳಾಸಕ್ಕೆ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಮೊಬೈಲ್: 9449894368 ,9844625799ನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.







