ಡಿ. 27 ರಿಂದ ಪಲ್ಲಮಜಲು ಮಸೀದಿಯಲ್ಲಿ ಸ್ವಲಾತ್ ವಾರ್ಷಿಕೋತ್ಸವ, ಧಾರ್ಮಿಕ ಪ್ರವಚನ
ಬಂಟ್ವಾಳ, ಡಿ. 21: ಬಿ.ಸಿ.ರೋಡು ಸಮೀಪದ ಪಲ್ಲಮಜಲು ಬದ್ರಿಯಾ ಜುಮಾ ಮಸ್ಜಿದ್ ವತಿಯಿಂದ 16ನೆ ಸ್ವಲಾತ್ ವಾರ್ಷಿಕೋತ್ಸವ, ಪ್ರಥಮ ಆಧ್ಯಾತ್ಮಿಕ ಮಜ್ಲಿಸುನ್ನೂರ್ ಹಾಗೂ 4 ದಿವಸಗಳ ಧಾರ್ಮಿಕ ಪ್ರವಚನ ಕಾರ್ಯಕ್ರಗಳು ಡಿ. 27 ರಿಂದ 30ರವರೆಗೆ ನಡೆಯಲಿದೆ.
ಸಮಸ್ತ ಉಪಾಧ್ಯಕ್ಷ ಶೈಖುನಾ ಹಾಜಿ ಕೆ.ಪಿ. ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಉದ್ಘಾಟಿಸಲಿದ್ದು, ಮಸೀದಿ ಅಧ್ಯಕ್ಷ ಹಾಜಿ ಕೆ.ಎಸ್. ಅಬೂಬಕರ್ ಪಲ್ಲಮಜಲು ಅಧ್ಯಕ್ಷತೆ ವಹಿಸುವರು. ಡಿ. 27ರಿಂದ 29ರವರೆಗೆ ನಡೆಯುವ ಧಾರ್ಮಿಕ ಪ್ರವಚನ ಕಾರ್ಯಗಳಲ್ಲಿ ಕ್ರಮವಾಗಿ ಪೋಸೋಟು ಮಸೀದಿ ಖತೀಬ್ ಮುಹಮ್ಮದ್ ಶರೀಫ್ ಅಶ್ರಫಿ, ಪುತ್ತೂರು ಕಲ್ಲೆಗ ಜುಮಾ ಮಸೀದಿ ಖತೀಬ್ ಅಬೂಬಕರ್ ಸಿದ್ದೀಕ್ ಅಹ್ಮದ್ ಜಲಾಲಿ, ಅಡ್ಯಾರ್-ಕಣ್ಣೂರು ಜುಮಾ ಮಸೀದಿ ಖತೀಬ್ ಅನ್ಸಾರುದ್ದೀನ್ ಫೈಝಿ ಅಲ್-ಬುರ್‍ಹಾನಿ ಧಾರ್ಮಿಕ ಉಪನ್ಯಾಸಗೈಯುವರು.
ಡಿ. 30ರಂದು ನಡೆಯುವ ಸಮಾರೋಪ ಸಮಾರಂಭ ಹಾಗೂ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮದ ನೇತೃತ್ವವನ್ನು ಸೈಯದ್ ಮುಖ್ತಾರ್ ಶಿಹಾಬ್ ತಂಙಳ್ ಪಾಣಕ್ಕಾಡ್ ವಹಿಸಲಿದ್ದಾರೆ. ಪಲ್ಲಮಜಲು ಮಸೀದಿ ಖತೀಬ್ ಯಅಕೂಬ್ ಫೈಝಿ ಅಧ್ಯಕ್ಷತೆ ವಹಿಸುವರು. ಕಾರ್ವಾನೆ ಮದೀನಾ ತಂಡದಿಂದ ಬುರ್ದಾ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ. ಪ್ರತೀ ದಿನ ಮಗ್ರಿಬ್ ಬಳಿಕ ದಫ್ ಪ್ರದರ್ಶನ ನಡೆಯಲಿದೆ ಎಂದು ಮಸೀದಿ ಪ್ರಕಟನೆ ತಿಳಿಸಿದೆ.