'ನಾನು ಸನ್ಯಾಸಿಯಾಗಲು ಹೊರಟಿದ್ದೆ' ಕೃತಿ ಕಾರ್ಕಳದಲ್ಲಿ ಅನಾವರಣ
ಉಡುಪಿ, ಡಿ.21: ಉಡುಪಿ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಮಂಜುನಾಥ್ ಕಾಮತ್ ಅವರ ಹೊಸ ಕೃತಿ ‘ನಾನು ಸನ್ಯಾಸಿ ಯಾಗಲು ಹೊರಟಿದ್ದೆ!’ ಡಿ.22ರಂದು ಕಾರ್ಕಳ ತಾಲೂಕಿನ ಕಡಾರಿ ಸುವರ್ಣಾ ನದಿ ತೀರದಲ್ಲಿ ಸಂಜೆ ಆರು ಗಂಟೆಗೆ ಅನಾವರಣಗೊಳ್ಳಲಿದೆ.
ಸಾವಿರ ಹಣತೆಗಳ ಬೆಳಕಿನಲ್ಲಿ, ನಾದ ಮಣಿನಾಲ್ಕೂರು ಅವರ ಕತ್ತಲ ಹಾಡು ಹಾಗೂ ಸುವರ್ಣ ನದಿಗೆ ಆರತಿ ಬೆಳಗುವುದರ ಜೊತೆಗೆ ಪುಸ್ತಕವೂ ಬಿಡುಗಡೆ ಗೊಳ್ಳಲಿದೆ ಎಂದು ಲೇಖಕ ಮಂಜುನಾಥ ಕಾಮತ್ ತಿಳಿಸಿದ್ದಾರೆ.
Next Story





