ಗಡಿಯಲ್ಲಿ ಸ್ನೈಪರ್ ದಾಳಿ: ಇಬ್ಬರು ಸೇನಾಧಿಕಾರಿಗಳು ಹುತಾತ್ಮ

ಶ್ರೀನಗರ, ಡಿ. 21: ಉತ್ತರ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಶುಕ್ರವಾರ ನಡೆದ ಸ್ನೈಪರ್ ದಾಳಿಗೆ ಭಾರತೀಯ ಸೇನೆಯ ಇಬ್ಬರು ಅಧಿಕಾರಿಗಳು ಹುತಾತ್ಮರಾಗಿದ್ದಾರೆ.
ಕುಪ್ವಾರದ ಜುಮ್‌ಗುಂಡ್‌ನ ಸೇನಾ ಠಾಣೆ ಮೇಲೆ ಗುಂಡಿನ ದಾಳಿ ಅಪರಾಹ್ನ ಗಡಿ ನಿಯಂತ್ರಣ ರೇಖೆಯ ಆ ಕಡೆಯಿಂದ ನಡೆಯುವ ಮೂಲಕ ಪಾಕಿಸ್ತಾನದ ಕದನ ವಿರಾಮ ಉಲ್ಲಂಘಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಪಡೆಗಳ ನಡುವೆ ಗುಂಡಿನ ಚಕಮಕಿ ಬಳಿಕ ಗಡಿ ನಿಯಂತ್ರಣ ರೇಖೆಯ ಆ ಕಡೆಯಿಂದ ನಡೆದ ಸ್ನೈಪರ್ ದಾಳಿಗೆ ಇಬ್ಬರು ಸೇನಾಧಿಕಾರಿಗಳು ಹುತಾತ್ಮರಾದರು ಎಂದು ಕುಪ್ವಾರದ ಪೊಲೀಸ್ ಅಧೀಕ್ಷಕ ಅಂಬಾರ್ಕರ್ ಶ್ರೀರಾಮ್ ದಿನಕರ್ ತಿಳಿಸಿದ್ದಾರೆ. ಸ್ನೈಪರ್ ದಾಳಿಯಿಂದ ಮೃತಪಟ್ಟ ಸೇನಾಧಿಕಾರಿಗಳನ್ನು ಸುಬೇದಾರ್ ರಾಮನ್ ಥಾಪ ಹಾಗೂ ಸುಬೇದಾರ್ ಗಾಮರ್ ಥಾಪ ಎಂದು ಗುರುತಿಸಲಾಗಿದೆ. ಇಬ್ಬರೂ ಸೇನೆಯ 2/8 ಜಿಆರ್ ಘಟಕಕ್ಕೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ.
Next Story





