ವಿದ್ಯಾರ್ಥಿನಿಯರ ಹಾಸ್ಟೆಲ್‍ಗೆ ನುಗ್ಗಿ ಆತಂಕ ಸೃಷ್ಟಿಸಿದ ವ್ಯಕ್ತಿ
ಮೈಸೂರು,21: ಕಿರಾತಕನೋರ್ವ ವಿದ್ಯಾರ್ಥಿನಿಯರ ಹಾಸ್ಟೆಲ್‍ಗೆ ನುಗ್ಗಿ ಆತಂಕ ಸೃಷ್ಟಿಸಿರುವ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕುವೆಂಪು ನಗರದ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ ನಿಲಯಕ್ಕೆ ಡಿ.17ರ ನಸುಕಿನ ಜಾವ 2.30ರಿಂದ 4.30ರ ವೇಳೆ 2 ಗಂಟೆಗಳ ಕಾಲ ಹಾಸ್ಟೆಲ್ ಕಂಪೌಂಡ್ ಒಳಗೆ ಕಿರಾತಕ ಓಡಾಡಿದ್ದು, ಓಡಾಟವನ್ನು ಸಿಸಿಟಿವಿಯಲ್ಲಿ ನೋಡಿ ವಿದ್ಯಾರ್ಥಿನಿಯರು ಬೆಚ್ಚಿ ಬಿದ್ದಿದ್ದಾರೆ. ನಂತರ ಪಕ್ಕದಲ್ಲಿರುವ ಮತ್ತೊಂದು ಹಾಸ್ಟೆಲ್‍ಗೆ ನುಗ್ಗಿ ವಿದ್ಯಾರ್ಥಿನಿಯರ ಮೊಬೈಲ್ ಕದಿಯಲು ಯತ್ನಿಸಿದ್ದು, ಅವರು ಕೂಗಿಕೊಂಡ ತಕ್ಷಣ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ.
ಈ ಹಾಸ್ಟೆಲ್‍ನಲ್ಲಿ 130ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇದ್ದಾರೆ. ಈ ಘಟನೆ ಕುರಿತು ವಿದ್ಯಾರ್ಥಿನಿಯರು ನಿಲಯಪಾಲಕರ ಗಮನಕ್ಕೆ ತಂದು ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
Next Story





