ಡಿ.22ರಿಂದ ಸುಲ್ತಾನ್ ಡೈಮಂಡ್ ಆ್ಯಂಡ್ ಗೋಲ್ಡ್ ಸಂಸ್ಥೆಯಿಂದ ‘ವಿಶ್ವ ವಜ್ರ’ ಆಭರಣಗಳ ಪ್ರದರ್ಶನ

ಮಂಗಳೂರು, ಡಿ. 21: ಸುಲ್ತಾನ್ ಡೈಮಂಡ್ ಆ್ಯಂಡ್ ಗೋಲ್ಡ್ ಸಂಸ್ಥೆಯ ವತಿಯಿಂದ ನಗರದ ಪ್ರದರ್ಶನ ಮಳಿಗೆಯಲ್ಲಿ ಡಿ. 22ರಂದು ದಕ್ಷಿಣ ಭಾರತದ ಬೃಹತ್ ವಜ್ರಾಭರಣಗಳ ಸಂಗ್ರಹ ಪ್ರದರ್ಶನ ಜನವರಿ 6ರವರೆಗೆ ‘ವಿಶ್ವ ವಜ್ರ’ ನಗರದ ಕಂಕನಾಡಿಯಲ್ಲಿರುವ ಸುಲ್ತಾನ್ ಆಭರಣ ಮಳಿಗೆಯಲ್ಲಿ ನಡೆಯಲಿದೆ.
ಕನ್ನಡದ ನಟಿ ಕಾವ್ಯ ಶೆಟ್ಟಿ ಸಂಜೆ 4.30 ಗಂಟೆಗೆ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಅದೇ ರೀತಿ ವಿವಿಧ ವಿಭಾಗಗಳ ವಜ್ರಾಭರಣ ಸಂಗ್ರಹವನ್ನು ಅತಿಥಿಗಳು ಉದ್ಘಾಟಿಸಲಿದ್ದಾರೆ.
ಯೆನೆಪೋಯ ಸಮೂಹ ಸಂಸ್ಥೆಗಳ ಪ್ರತಿನಿಧಿ ಹಸೀನಾ ನೌಫಾಲ್ ಯೆನೆಪೋಯ ಸಾಲಿಟೇರ್ ಕಲ್ಷೆನ್, ಮಂಜುನಾಥ್ ರಬ್ಬರ್ ಸಂಸ್ಥೆಯ ಸಿಇಒ ಮಂಜುನಾಥ ಹೆಬ್ಬಾರ್ ಸಿಂಗಾಪು ಕಲೆಕ್ಷನ್, ಡಾ. ಕವಿತಾ ಐವನ್ ಡಿ ಸೋಜರವರು ಯು.ಎಸ್ ಕಲೆಕ್ಷನ್, ಡಾ.ಆರೂರು ಪ್ರಸನ್ನ ರಾವ್ ಬೆಲ್ಜಿಯಂ ಕಲೆಕ್ಷನ್, ಕ್ರೋಯೀಸ್ ರೆಸ್ಟೋರೆಂಟ್ ಪ್ರೊಪ್ರೈಟರ್ ರೂಪಾ ಧರ್ಮಯ್ಯ ಮಧ್ಯಪ್ರಾಚ್ಯ ದೇಶಗಳ ಸಂಗ್ರಹ , ವೆಸ್ಟರ್ನ್ ಇಂಡಿಯಾ ಪ್ಲೈವುಡ್‌ನ ಪ್ರತಿನಿಧಿ ರಫೀಯಾ ಕೋಯ ಟರ್ಕಿಶ್ ಕಲ್ಷೆನ್, ಅಪೋಲೊ ಟಯರ್ ಪ್ರತಿನಿಧಿ ನೂರ್‌ಜಹಾನ್ ಫ್ರೆಂಚ್ ಕಲ್ಷೆನ್, ಓಡ್ನಿ ಬಾಟಿಕ್ ಫ್ರೋಪ್ರೈಟರ್ ಶರ್‌ವತ್ ಸಾಜಿದ್ ಪೋಲ್ಕಿ ಕಲೆಕ್ಷನ್, ಫಾತಿಮಾ ಫರ್ವಿನ್ ಅಹಮ್ಮದ್ ಅಟ್ಟೀರ್ ಫ್ರೊಫೆಶನಲ್ ವಜ್ರಾಭರ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ.
ಪ್ರದರ್ಶನದಲ್ಲಿ 10,000 ಕ್ಯಾರೆಟ್‌ನ ಐಜಿಐ ಪ್ರಮಾಣೀಕೃತ ಇಟೆಲಿ, ಫ್ರಾನ್ಸ್, ಟರ್ಕಿ,ಬಿಲ್ಜಿಯಂ, ಯು.ಎಸ್, ಸಿಂಗಾಪುರ್, ಮಧ್ಯಪ್ರಾಚ್ಯದ ಸಾಲಿಟೇರ್ ವಿಶೇಷ ಸಂಗ್ರಹಗಳನ್ನು ಹೊಂದಿದೆ. ವಸ್ತುಪ್ರದರ್ಶನ ಮುಂಬೈಯ ಐಐಜಿಎಸ್ ವಸ್ತು ಪ್ರದರ್ಶನದಲ್ಲಿ ಪ್ರದರ್ಶನಗೊಂಡಿರುವ ಆಭರಣಗಳ ಪ್ರದರ್ಶನ ನಡೆಯಲಿದೆ.
ಮಧುವೆ, ವಧುವಿನ ಆಭರಣ, ನೆಕ್ಲೆಸ್, ಬಳೆ, ಮೂಗಿನ ಆಭರಣಗಳ ವಿಶೇಷ ಸಂಗ್ರಹವನ್ನು ಒಳಗೊಂಡಿರುತ್ತದೆ. ಈ ಸಂದರ್ಭದಲ್ಲಿ ಖರೀದಿಸುವ ಗ್ರಾಹಕರಿಗೆ 8000 ರೂ ಮೊತ್ತದ ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಕಳೆದ 6 ವರ್ಷಗಳಿಂದ ಸುಲ್ತಾನ್ ಸಮೂಹ ಸಂಸ್ಥೆಗಳ ವತಿಯಿಂದ ಗ್ರಾಹಕರಿಗಾಗಿ ಈ ರೀತಿ ಪ್ರದರ್ಶನ ನಡೆಸಲಾಗುತ್ತಿದೆ ಎಂದು ಎಂ.ಡಿ ಡಾ.ಟಿ.ಎಂ.ಅಬ್ದುಲ್ ರವೂಫ್ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಟಿ.ಎಂ.ಅಬ್ದುಲ್ ರಹೀಮಾನ್ ತಿಳಿಸಿದ್ದಾರೆ.