ಬಿ.ಸಿ.ರೋಡ್: ಕರಾವಳಿ ಕಲೋತ್ಸವ

ಬಂಟ್ವಾಳ, ಡಿ. 21: ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಅಸೋಸಿಯೇಟ್ಸ್ ಮೈದಾನದಲ್ಲಿ ಕರಾವಳಿ ಕಲೋತ್ಸವ ಶುಕ್ರವಾರ ಸಂಜೆ ಆರಂಭಗೊಂಡಿತು.
ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ಕಲಾ ಮಂಟಪದಲ್ಲಿ ಜಾನಪದ ದಿಬ್ಬಣಕ್ಕೆ ತಹಶೀಲ್ದಾರ್ ಪುರಂದರ ಹೆಗ್ಡೆ ಚಾಲನೆ ನೀಡಿದರು. ಈ ಸಂದರ್ಭ ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ ಜೈನ್ ಪಂಜಿಕಲ್ಲು, ಗೌರವಾಧ್ಯಕ್ಷ ಪಿ.ಜಯರಾಮ ರೈ, ಸ್ಥಾಪಕ, ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ, ಹಿರಿಯ ರಂಗಕರ್ಮಿ ಮಂಜು ವಿಟ್ಲ, ಸ್ವಾಗತ ಸಮಿತಿ ಅಧ್ಯಕ್ಷ ಕಾಂತಾಡಿಗುತ್ತು ಸೀತಾರಾಮ ಶೆಟ್ಟಿ, ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ, ಚಿಣ್ಣರೋತ್ಸವ ಅಧ್ಯಕ್ಷ ಅಭಿಷೇಕ್ ಬಿ.ಕೆ, ಗೋಲ್ಡನ್ ಪಾರ್ಕ್ ಅಸೋಸಿಯೇಟ್ಸ್ ಆಡಳಿತ ಪಾಲುದಾರ ಅಶೋಕ್ ಕುಮಾರ್ ಬರಿಮಾರು ಸಹಿತ ನಾನಾ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.
ಮೆರವಣಿಗೆಯಲ್ಲಿ ಶ್ರೀ ಶಾರದಾ ಆಟ್ರ್ಸ್ ಜಾನಪದ ಗೊಂಬೆ ಬಳಗ ಮೊಗರ್ನಾಡುವಿನ ಕೀಲುಕುದುರೆ, ಗೊಂಬೆ ಬಳಗ, ಬಣ್ಣದ ಕೊಡೆಗಳು, ಮಂಡ್ಯದ ಶ್ರೀ ಶಾರದಾಂಬಾ ಜನ್ಮಭೂಮಿ ಜಾನಪದ ಕಲಾತಂಡದಿಂದ ಪೂಜಾಕುಣಿತ, ಚಿಕ್ಕಮಗಳೂರು ಕರಾಡೆ ಬ್ರದರ್ಸ್ ಡೊಳ್ಳು ಯುವಕರ ಸಂಘದಿಂದ ಡೊಳ್ಳು ಕುಣಿತ, ಚಿಕ್ಕಮಗಳೂರು ಹಾಸಂದಿಯ ಬಸವಶ್ರೀ ಮಹಿಳಾ ವೀರಗಾಸೆ ಕಲಾತಂಡದಿಂದ ಮಹಿಳಾ ವೀರಗಾಸೆ, ಮೊಗರ್ನಾಡು ಶ್ರೀ ಶಾರದಾ ಚೆಂಡೆ ಬಳಗದಿಂದ ಚೆಂಡೆ ಮೇಳ, ಮಂಗಳೂರು ಬರ್ಕೆ ಶ್ರೀ ಗೋಕರ್ಣನಾಥೇಸ್ವರ ನಾಸಿಕ್ ಬ್ಯಾಂಡ್ ತಂಡದಿಂದ ನಾಸಿಕ್ ಬ್ಯಾಂಡ್, ಮೊಗರ್ನಾಡು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸದಸ್ಯರಿಂದ ಸ್ವಾಗತ ಕಲಶ, ದಿನೇಶ್ ಸಜಿಪ ಮತ್ತು ತಂಡದಿಂದ ಕೊಂಬು ಕಹಳೆ, ಶ್ರೀ ಶಾರದಾ ನಾಸಿಕ್ ಬ್ಯಾಂಡ್ ತಂಡದ ನಾಸಿಕ್ ಬ್ಯಾಂಡ್ ಮತ್ತು ನವೋದಯ ಸ್ವಸಹಾಯ ಗುಂಪು ಬಂಟ್ವಾಳದಿಂದ ಸ್ವಾಗತಛತ್ರಿ ಮೆರವಣಿಗೆಗೆ ಮೆರಗು ನೀಡಿತು.