ಹನೂರು: ಹೂಗ್ಯಂ ಅರಣ್ಯ ಪ್ರದೇಶದಲ್ಲಿ ಹೆಣ್ಣಾನೆ ಸಾವು
ಹನೂರು,ಡಿ.21: ತಾಲೂಕಿನ ಮಲೈಮಹದೇಶ್ವರ ಹೂಗ್ಯಂನ ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ಸುಮಾರು 15 ವರ್ಷದ ಹೆಣ್ಣಾನೆ ಸಾವಿಗಿಡಾಗಿದೆ.
ಹೂಗ್ಯಂನ ಅರಣ್ಯ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಗೆ ಆಕಸ್ಮಿಕವಾಗಿ ಸಾವನ್ನಪ್ಪಿರುವ ಹೆಣ್ಣಾನೆಯ ಕಳೇಬರಹವೊಂದು ಕಂಡಿದೆ. ತಕ್ಷಣ ಮಾಹಿತಿಯನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಎಸಿಎಫ್ ಮುತ್ತೇಗೌಡ್ರು ಆರ್ ಎಫ್ಒ ಸುಂದರ್, ಪಶು ವೈದ್ಯ ಸಿದ್ದರಾಜು ಹಾಗೂ ಸಿಬ್ಬಂದಿ ತೆರಳಿ ಮರೋಣತ್ತರ ಪರೀಕ್ಷೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಡಿಎಫ್‍ಒ ಏಳುಕೊಂಡಲರವರು ಮಾಹಿತಿ ನೀಡಿದ್ದಾರೆ.
Next Story





