ಯುನಿವೆಫ್: 'ಅರಿಯಿರಿ ಮನುಕುಲದ ಪ್ರವಾದಿಯನ್ನು' ಅಭಿಯಾನದ ಪ್ರಚಾರ ವಾಹನ ಜಾಥಾಕ್ಕೆ ಚಾಲನೆ

ಬೆಂಗಳೂರು, ಡಿ.22: ಯುನಿವೆಫ್ ಕರ್ನಾಟಕ ನವೆಂಬರ್ 30ರಿಂದ ಫೆಬ್ರವರಿ 1ರವರೆಗೆ ಹಮ್ಮಿಕೊಂಡಿರುವ 'ಅರಿಯಿರಿ ಮನುಕುಲದ ಪ್ರವಾದಿಯನ್ನು' ಅಭಿಯಾನದ ಪ್ರಯುಕ್ತ ಪ್ರಚಾರ ಜೀಪ್ ಜಾಥಾದ ಉದ್ಘಾಟನೆಯನ್ನು ಉಳ್ಳಾಲ ನಗರಸಭಾ ಸದಸ್ಯ ಮುಶ್ತಾಕ್ ಪಟ್ಲ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಪ್ರಸಕ್ತ ಸನ್ನಿವೇಶದಲ್ಲಿ ಪ್ರವಾದಿ ಪ್ರಚಾರ ಅಭಿಯಾನ ಬಹಳ ಮಹತ್ವವನ್ನು ಪಡೆದುಕೊಳ್ಳುತ್ತದೆ ಹಾಗೂ ಈ ಮಹತ್ಕಾರ್ಯವನ್ನು ಕೈಗೊಂಡ ಯುನಿವೆಫ್ ಕಾರ್ಯ ಶ್ಲಾಘನೀಯ ಎಂದರು.
ಯುನಿವೆಫ಼್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅಭಿಯಾನದ ಉದ್ದೇಶದ ಬಗ್ಗೆ ಮಾಹಿತಿ ನೀಡಿ ಜೀಪ್ ಜಾಥಾವು ಜಿಲ್ಲೆಯ ಮೂಲೆಮೂಲೆಗಳಿಗೂ ಪ್ರವಾದಿ ಸಂದೇಶವನ್ನು ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದರು.
ಅಭಿಯಾನ ಸಂಚಾಲಕ ಅಬ್ದುಲ್ಲಾ ಪಾರೆ ಸ್ವಾಗತಿಸಿದರು. ಸಯೀದ್ ಅಹ್ಮದ್ ಕಿರಾಅತ್ ಪಠಿಸಿದರು.
Next Story