ಪಟ್ಟಿಕಾಡ್ ಜಾಮಿಯ ನೂರಿಯ್ಯಿ ಅರಬಿಯ್ಯಿ ಸನದುದಾನ: ಡಿ.27ರಂದು ಅಡ್ಯಾರ್ ಕಣ್ಣೂರಿನಲ್ಲಿ ಪ್ರಚಾರ ಸಮ್ಮೇಳನ
ಮಂಗಳೂರು, ಡಿ.22: ಕೇರಳದ ಪಟ್ಟಿಕಾಡ್ ಜಾಮಿಯ ನೂರಿಯ್ಯಿ ಅರಬಿಯ್ಯಿ ಇದರ 56ನೇ ವಾರ್ಷಿಕ ಮತ್ತು 54ನೇ ಸನದುದಾನ ಮಹಾ ಸಮ್ಮೇಳನದ ಪ್ರಚಾರ ಸಮ್ಮೇಳನ ಡಿ.27ರಂದು ಅಡ್ಯಾರ್ ಕಣ್ಣೂರು ಕೇಂದ್ರ ಜುಮಾ ಮಸೀದಿಯಲ್ಲಿ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳ ಒಕ್ಕೂಟ ಡಿಕೆಎಸ್‌ಎ್ ಮತ್ತು ಎಸ್‌ಕೆಎಸ್‌ಎಸ್‌ಎಒ ಅಡ್ಯಾರ್ ಕಣ್ಣೂರು ಕ್ಲಸ್ಟರ್ ಜಂಟಿ ಆಶ್ರಯದಲ್ಲಿ ಪ್ರಚಾರ ಸಮ್ಮೇಳನ ನಡೆಯಲಿದೆ ಎಂದು ಡಿಕೆಎಸ್‌ಎ್ ಅಧ್ಯಕ್ಷ ಅಹ್ಮದ್ ನಈಂ ಮುಕ್ವೆ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ ನಮಾಝ್ ಬಳಿಕ ಶಂಸುಲ್ ಉಲಮಾ ವೌಲಿದ್ ಪಾರಾಯಣ ಅಲ್ಹಾಜ್ ಉಮರ್ ಫೈಝಿ ಸಾಲ್ಮರ ನೇತೃತ್ವದಲ್ಲಿ ನಡೆಯಲಿದೆ. ಬಳಿಕ ಅಬ್ದುರ್ರಹ್ಮಾನ್ ಹಾಜಿ ಸಿತಾರ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಅಧ್ಯಯನ ಶಿಬಿರ ಆರಂಭಗೊಳ್ಳಲಿದೆ. ‘ಇಸ್ಲಾಮಿಕ್ ಶರೀಅತ್ ಮತ್ತು ಸಮಕಾಲೀನ ಚರ್ಚೆಗಳು’ ವಿಷಯದಲ್ಲಿ ವಿದ್ವಾಂಸ ಲಿಯಾವುದ್ದೀನ್ ಫೈಝಿ ವಿಷಯ ಮಂಡಿಸಲಿದ್ದಾರೆ.
ಸಂಜೆ 4ಕ್ಕೆ ಆಧ್ಯಾತ್ಮಿಕ ಸಂಗಮಕ್ಕೆ ಸೂಫಿವರ್ಯ ಶೈಖುನಾ ಏಲಂಕುಳಂ ಬಾಪು ಮುಸ್ಲಿಯಾರ್ ನೇತೃತ್ವ ವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಶೈಖುನಾ ಆಲಿಕುಟ್ಟಿ ಮುಸ್ಲಿಯಾರ್, ಪಾಣಕ್ಕಾಡ್ ಸೈಯದ್ ಸಾಬಿಕಲಿ ಶಿಹಾಬ್ ತಂಙಳ್, ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್, ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಅನ್ಸಾರ್ ೈಝಿ ಬುರ್ಹಾನಿ, ಸ್ವಾಗತ ಸಮಿತಿ ಸಂಚಾಲಕ ಹಮೀದ್ ಕಣ್ಣೂರು, ಹಮೀದ್ ಹಾಜಿ ಬೋರುಗುಡ್ಡೆ ಉಪಸ್ಥಿತರಿದ್ದರು.