ರಾಷ್ಟ್ರಪತಿ ಭೇಟಿ: ಡಿ. 26ರಿಂದಲೇ ಅಂಗಡಿ ಮುಚ್ಚಲು ಸೂಚನೆ
ಉಡುಪಿ, ಡಿ. 22: ರಾಷ್ಟ್ರಪತಿಗಳು ಡಿ.27ರಂದು ಉಡುಪಿಗೆ ಆಗಮಿಸಿ, ಸರ್ಕ್ಯೂಟ್ ಹೌಸ್, ಶ್ರೀಕೃಷ್ಣ ಮಠಗಳಿಗೆ ಭೇಟಿ ನೀಡಲಿರುವುದರಿಂದ, ಭದ್ರತಾ ದೃಷ್ಠಿಯಿಂದ ಉಡುಪಿಯ ಸಂಸ್ಕೃತ ಕಾಲೇಜು ಪಕ್ಕದ ಗೇಟಿನಿಂದ ಸಂಪೂರ್ಣ ರಥಬೀದಿಯ ಸುತ್ತಮುತ್ತ ಹಾಗೂ ರಾಜಾಂಗಣದ ಸುತ್ತಮುತ್ತ ಇರುವ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಡಿ.26ರ ಅಪರಾಹ್ನ 12ಗಂಟೆಯಿಂದ 27ರ ಅಪರಾಹ್ನ 3 ಗಂಟೆಯವರೆಗೆ ಮುಚ್ಚುವಂತೆ ಹಾಗೂ ಸಾರ್ವಜನಿಕರಿಗೆ ಡಿ.27ರಂದು ಬೆಳಗ್ಗೆ 6ರಿಂದ ಅಪರಾಹ್ನ 3ಗಂಟೆಯವರೆಗೆ ಶ್ರೀಕೃಷ್ಣ ಮಠದ ಭೇಟಿಯನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.
Next Story