ಗ್ರಾಪಂ ಚುನಾವಣೆ: ಮದ್ಯ ಮಾರಾಟ ನಿಷೇಧ ಆದೇಶ ಹಿಂತೆಗೆತ
ಉಡುಪಿ, ಡಿ.22: ತೆರವುಗೊಂಡಿದ್ದ ಕಾರ್ಕಳ ತಾಲೂಕು ನಿಟ್ಟೆ ಗ್ರಾಪಂ ಹಾಗೂ ಕುಂದಾಪುರ ತಾಲೂಕಿನ ಉಳ್ಳೂರು ಗ್ರಾಪಂನ ತಲಾ ಒಂದು ಸದಸ್ಯ ಸ್ಥಾನ ತುಂಬಲು ಘೋಷಿಸಲಾದ ಉಪಚುನಾವಣೆಗೆ ಕೇವಲ ಒಂದು ನಾಮಪತ್ರ ಸಲ್ಲಿಕೆಯಾಗಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿ ರುವುದರಿಂದ ಅಲ್ಲಿ ಜ.2ಕ್ಕೆ ನಿಗದಿಯಾದ ಚುನಾವಣೆ ನಡೆಯುವುದಿಲ್ಲ.
ಆದ್ದರಿಂದ ಕಾರ್ಕಳದ ನಿಟ್ಟೆ ಗ್ರಾಪಂ ಹಾಗೂ ಕುಂದಾಪುರದ ಉಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಹಾಗೂ ಗ್ರಾಪಂಗಳ ವ್ಯಾಪ್ತಿಯಲ್ಲಿ ಹೊರಡಿಸಲಾಗಿದ್ದ ಮದ್ಯ ಮಾರಾಟ ನಿಷೇಧದ ಆದೇಶವನ್ನು ವಾಪಸ್ಸು ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story