ಕೋಡಿ: ಸಮುದ್ರಕ್ಕೆ ಬಿದ್ದು ಯುವಕ ಮೃತ್ಯು
ಕುಂದಾಪುರ, ಡಿ. 22: ಕೋಡಿಯ ತಲೆಯ ಬಳಿ ಡಿ.19ರಂದು ಸಂಜೆ ಬೋಟಿನಲ್ಲಿ ಮಿನುಗಾರಿಕೆ ಬಲೆ ಎಳೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ ಅಂಕೋಲಾ ಹಾರವಾಡ ಗ್ರಾಮದ ಕೃಷ್ಣ ಅಂಬಿಗ ಎಂಬವರ ಮಗ ಗಣೇಶ ಶಿವರಾಂ ಅಂಬಿಗ (28) ಎಂಬವರ ಮೃತದೇಹವು ಡಿ.21ರಂದು ಸಂಜೆ 6ಗಂಟೆಗೆ ಸುಮಾರಿಗೆ ಅಲ್ಲೇ ಸಮೀಪದ ಸಮುದ್ರ ನೀರಿನಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story