ಫರಂಗಿಪೇಟೆ: ಪುದು ಮಾಪ್ಲ ಶಾಲೆಯಲ್ಲಿ ವಾರ್ಷಿಕೋತ್ಸವ

ಫರಂಗಿಪೇಟೆ, ಡಿ. 22: ಪುದು ಮಾಪ್ಲ ಶಾಲೆ ಫರಂಗಿಪೇಟೆ ಮತ್ತು ಟುಡೇ ಫೌಂಡೇಶನ್ ಇದರ ಸಹಭಾಗಿತ್ವದಲ್ಲಿ ವಾರ್ಷಿಕೋತ್ಸವ ಮತ್ತು ಗಣ್ಯ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮ ಶನಿವಾರ ನಡೆಯಿತು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಕಾಶ್ ಶೆಟ್ಟಿ ದೇವಸ್ಯ ನೆರವೇರಿಸಿದರು. ಅಧ್ಯಕ್ಷತೆಯನ್ನು ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ವಹಿಸಿದರು, ಟುಡೇ ಯೂತ್ ಫೆಡರೇಶನ್ ಮತ್ತು ಮಾಜಿ ಜಿಲ್ಲಾ ಪಂ. ಸದಸ್ಯ ಉಮರ್ ಫಾರೂಕು ಪ್ರಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ಗ್ರಾಮಾಂತರ ಸಬ್ ಇನ್ಸ್ಪೆಕ್ಟರ್ ಪ್ರಸನ್ನ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮ್ಲಾನ್ ಕುಂಪನಮಜಲ್, ಮಾಜಿ ಅಧ್ಯಕ್ಷ ಮುಹಮ್ಮದ್ ಹನೀಫ್, ಹಿರಿಯರಾದ ಎಫ್.ಎ. ಕಾದರ್, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶಿಕ್ಷಕರಾದ ಬಿ.ಎಮ್ ಮುಹಮ್ಮದ್ ಮತ್ತು ಸೇವಾಂಜಲಿ ಪ್ರತಿಷ್ಟಾನ ಟ್ರಸ್ಟ್ ಮುಖ್ಯಸ್ಥ ಕೃಷ್ಣಕುಮಾರ್ ಪೂಂಜ, ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಪುದು ಮಾಪ್ಲ ಶಾಲೆಯ ಮುಖ್ಯ ಶಿಕ್ಷಕಿ ಶಕುಂತಲಾ, ಫರಂಗಿಪೇಟೆ ಮಸೀದಿ ಅಧ್ಯಕ್ಷ ಮುಹಮ್ಮದ್ ಬಾವ, ತಾಲಾಕು ಪಂಚಾಯತ್ ಮಾಜಿ ಸದಸ್ಯ ಇಕ್ಬಾಲ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶಮೀಮ, ಮಾಜಿ ಅಧ್ಯಕ್ಷೆ ಲಕ್ಷ್ಮೀ, ಗ್ರಾಪಂ ಸದಸ್ಯೆ ಸುಜಾತ, ಯನೈಟೆಡ್ ಸ್ಪೋಟ್ಸ್ ಕ್ಲಬ್ ಗೌರಾವಾಧ್ಯಕ್ಷ ಗಫೂರು ದುಬೈ, ಪುದು ಗ್ರಾಪಂ ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಇಕ್ಬಾಲ್, ಸದಸ್ಯರಾದ ಹಾಶಿರ್ ಪೇರಿಮಾರ್, ಮೊಹಮ್ಮದ್ ಮೋನು, ರಿಯಾಝ್ ಕುಮಪನಮಜಲ್, ರಝಿಯಾ, ಪಿ.ಎಫ್.ಐ ಬಂಟ್ವಾಳ ಪ್ರ ಕಾರ್ಯದರ್ಶಿ ಸಲೀಮ್ ಕುಮಪನಮಜಲ್, ಮುಡಿಪು ಬ್ಲಾಕ್ ಅಧ್ಯಕ್ಷ ಇಮ್ತಿಯಾಝ್, ಹಿದಾಯ ಫೌಂಡೇಶನ್ ಮಾಜಿ ಅಧ್ಯಕ್ಷ ಬಶೀರ್, ಟುಡೇ ಫೌಂಡೇಶನ್ ಸದಸ್ಯ ಮಜೀದ್, ಎಸ್.ಡಿ.ಪಿ.ಐ ಪುದು ಗ್ರಾಮ ಸಮಿತಿ ಅಧ್ಯಕ್ಷ ಇಕ್ಬಾಲ್ ಅಬೂಬಕ್ಕರ್, ಇಸ್ಮಾಯಿಲ್, ಎಸ್.ಡಿ.ಪಿ.ಐ ಮುಖಂಡ ಸುಲೈಮಾನ್ ಉಸ್ತಾದ್, ಮಜೀದ್ ಪೇರಿಮಾರ್, ಝಫರುಲ್ಲಾ ಒಡೆಯರ್, ಅಬ್ದುಲ್ ಖಾದರ್ ಉಪಸ್ಥಿತರಿದ್ದರು.
ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಕೃಷ್ಣಕುಮಾರ್ ಪೂಂಜ, ಶಿಕ್ಷಕ ಬಿ ಮೊಹಮ್ಮದ್ ಮತ್ತು ಶಿಕ್ಷಕಿಯಾದ ಜ್ಯೋತಿ ಜಿ ಪಿಂಟೋ, ಕ್ರೀಡಾಪಟು ಇಹ್ತಿಶಾಮ್ ರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಹಮೀದ್ ಗೋಳ್ತಮಜಲ್ ಕಾರ್ಯಕ್ರಮ ನಿರೂಪಿಸಿದರು.