ಕಾಪು: ಹೊಟೇಲ್ ಕಾರ್ಮಿಕ ಮೃತ್ಯು
ಕಾಪು, ಡಿ. 22: ಹೊಟೇಲ್ ಕಾರ್ಮಿಕನೋರ್ವ ಅನುಮಾನಾಸ್ಪದವಾಗಿ ಕಾಪು ಮಾರುಕಟ್ಟೆಯಲ್ಲಿ ಮೃತಪಟ್ಟಿದ್ದು, ಶನಿವಾರ ಬೆಳಕಿಗೆ ಬಂದಿದೆ.
ಕಾಪು ಸಮೀಪದ ಮಲ್ಲಾರು - ಕುಡ್ತಿಮಾರು ನಿವಾಸಿ ರಾಜೇಶ್ ನಾಯ್ಕ್ (38) ಮೃತರು ಎಂದು ಗುರುತಿಸಲಾಗಿದೆ. ಎರ್ಮಾಳಿನ ಹೊಟೇಲೊಂದರಲ್ಲಿ ಕುಕ್ ಆಗಿ ಅವರು ಕೆಲಸ ಮಾಡುತ್ತಿದ್ದರು.
ಶುಕ್ರವಾರ ರಾತ್ರಿ ಮನೆಗೆ ಬರುವ ಸಂದರ್ಭ ಕಾಪು ಮೀನು ಮಾರುಕಟ್ಟೆ ಬಳಿ ಕಾಲು ಜಾರಿ ಬಿದ್ದು, ಸ್ಥಳದಲ್ಲೇ ವಿಪರೀತ ರಕ್ತಸ್ರಾವವಾದ ಪರಿಣಾಮ ಮೃತಪಟ್ಟಿರಬೇಕೆಂದು ಅಂದಾಜಿಸಲಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story