ದಿಲ್ಲಿ ಕೋರ್ಟ್ ಎದುರು ಹಾಜರಾದ ಮಿಶೆಲ್
ಹೊಸದಿಲ್ಲಿ, ಡಿ.22: ಆಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಒಪ್ಪಂದ ಪ್ರಕರಣದಲ್ಲಿ ಮಧ್ಯವರ್ತಿ ಎನ್ನಲಾಗಿರುವ ಬ್ರಿಟಿಷ್ ಪ್ರಜೆ ಕ್ರಿಶ್ಚಿಯನ್ ಮಿಶೆಲ್‌ರನ್ನು ಶನಿವಾರ ದಿಲ್ಲಿಯ ನ್ಯಾಯಾಲಯದೆದುರು ಹಾಜರು ಪಡಿಸಲಾಗಿದೆ.
ನ್ಯಾಯಾಲಯದ ಕೋಣೆಯೊಳಗೆ ಮಿಶೆಲ್‌ರನ್ನು 15 ನಿಮಿಷ ವಿಚಾರಣೆ ನಡೆಸಲು ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಜಾರಿ ನಿರ್ದೇಶನಾಲಯ(ಇಡಿ)ಕ್ಕೆ ಅನುವು ಮಾಡಿಕೊಟ್ಟರು. ಹಣ ಅಕ್ರಮ ಸಾಗಣೆ ಪ್ರಕರಣದಲ್ಲಿ ಮಿಶೆಲ್‌ರನ್ನು ಬಂಧಿಸಲು ಅವಕಾಶ ನೀಡಬೇಕೆಂದು ಇಡಿ ಕೋರಿಕೆ ಸಲ್ಲಿಸಿದೆ.
ಜಾಮೀನು ಕೋರಿ ಮಿಶೆಲ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ಕಾಯ್ದಿರಿಸಿದ್ದು ಮಿಶೆಲ್‌ರನ್ನು ಡಿಸೆಂಬರ್ 28ರವರೆಗೆ ನ್ಯಾಯಾಂಗ ಕಸ್ಟಡಿಯ ವಶಕ್ಕೆ ನೀಡಿದೆ.
Next Story