Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸಾವಯವ ಕೃಷಿಯಲ್ಲಿ ಗೆದ್ದ ಇದಿನಬ್ಬ

ಸಾವಯವ ಕೃಷಿಯಲ್ಲಿ ಗೆದ್ದ ಇದಿನಬ್ಬ

ಅಬ್ದುಲ್ ರಹಿಮಾನ್ ತಲಪಾಡಿಅಬ್ದುಲ್ ರಹಿಮಾನ್ ತಲಪಾಡಿ23 Dec 2018 10:46 AM IST
share
ಸಾವಯವ ಕೃಷಿಯಲ್ಲಿ ಗೆದ್ದ ಇದಿನಬ್ಬ

ಇಂದು ಕಿಸಾನ್ ದಿನ: ಈ ಹಿನ್ನೆಲೆಯಲ್ಲಿ ನಾಡಿನ ವಿವಿಧ ರೈತರನ್ನು ಪತ್ರಿಕೆ ಸಂದರ್ಶನ ಮಾಡಿದೆ. ಅವರ ಸಾಧನೆ, ಕೃಷಿಯ ಅನುಭವಗಳು, ಎದುರಿಸುತ್ತಿರುವ ಸವಾಲು, ಕೃಷಿಯ ಮೂಲಕ ಅವರು ಕಟ್ಟಿಕೊಂಡಿರುವ ಬದುಕನ್ನು ರೈತರು ಹಂಚಿಕೊಂಡಿದ್ದಾರೆ.

ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮದ ನಂದಾವರ-ಕೊಪ್ಪಳ ನಿವಾಸಿ ಎನ್.ಕೆ.ಇದಿನಬ್ಬ ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದರೂ ಪ್ರಶಸ್ತಿ, ಪ್ರಚಾರದ ಹಿಂದೆ ಹೋದವರಲ್ಲ.ಅವರೊಂದಿಗೆ ರಾಷ್ಟ್ರೀಯ ರೈತರ ದಿನದ ಹಿನ್ನೆಲೆಯಲ್ಲಿ ‘ವಾರ್ತಾಭಾರತಿ’ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ.

►ನೀವು ಮಾಡುತ್ತಿರುವ ಪ್ರಮುಖ ಕೃಷಿ ಯಾವುದು? ಎಷ್ಟು ಸಮಯದಿಂದ ಮಾಡುತ್ತಿದ್ದೀರಿ? ಇದು ನಿಮ್ಮ ಬದುಕಿಗೆ ಎಷ್ಟರ ಮಟ್ಟಿಗೆ ಪ್ರಯೋಜನಕಾರಿ, ಲಾಭದಾಯಕವಾಗಿದೆ?

 1975ರಿಂದ ಕೃಷಿ ಕಾಯಕ ಆರಂಭಿಸಿರುವ ನಾನು ಭತ್ತ, ಬಾಳೆ, ಅಡಿಕೆ, ತೆಂಗು, ಕರಿಮೆಣಸು, ತೊಂಡೆಕಾಯಿ ಬೆಳೆಯ ಜೊತೆ ಉಪ ಕಸುಬಾಗಿ ಕೋಳಿ ಸಾಕಣೆ ಮತ್ತು ಹೈನುಗಾರಿಕೆ ಮಾಡುತ್ತಿದ್ದೇನೆ. ಕೃಷಿಯಿಂದ ಕುಟುಂಬಕ್ಕೆ ಆದಾಯ ಬರುತ್ತಿದ್ದು ಲಾಭದಾಯಕವೂ ಆಗಿದೆ.

►ಕೃಷಿಯನ್ನೇ ಆಯ್ಕೆ ಮಾಡಿಕೊಳ್ಳಲು ಮುಖ್ಯ ಕಾರಣವೇನು?

ನಮ್ಮದು ಕೃಷಿ ಪ್ರಧಾನ ಕುಟುಂಬ. ತಂದೆ ಹೊಲದಲ್ಲಿ ಕೆಲಸ ಮಾಡುವಾಗ ನನ್ನನ್ನು ಸೇರಿಸಿಕೊಳ್ಳುತ್ತಿದ್ದರು. ತಂದೆಯ ನಿಧನದ ನಂತರ ಕೃಷಿ ಕಾರ್ಯದಲ್ಲಿ ತೊಡಗಿ ಕೃಷಿಕನಾದೆ.

►ಆರಂಭದಲ್ಲಿ ನೀವು ಎದುರಿಸಿದ ಸವಾಲುಗಳು ಏನೇನು? ಇದರ ಸೋಲು ಗೆಲುವುಗಳನ್ನು ಹಂಚಿ ಕೊಳ್ಳಿ.

ತಂದೆಯ ನಿಧನದ ನಂತರ ನಾನು ಕೃಷಿಯಲ್ಲಿ ತೊಡಗಿಕೊಂಡಾಗ ಕೆಲವರು ವ್ಯಂಗ್ಯವಾಡಿದ್ದರು. ಇನ್ನು ಕೆಲವರು ಬೆಳೆ ನಷ್ಟ ಉಂಟಾಗಹುದು. ಈ ಸಾಹಸ ಬೇಡ. ಜಮೀನು ಮಾರಿಬಿಡು ಎಂದರು. ಇದನ್ನು ಸವಾಲಾಗಿಸಿ ಸ್ವೀಕರಿಸಿದೆ. ತಂದೆ ಎರಡು ಬೆಳೆ ಬೆಳೆಯುತ್ತಿದ್ದರೆ ನಾನು ಮೂರು ಬೆಳೆ ಬೆಳೆದೆ. ಶೇ.80ರಷ್ಟು ಯಶಸ್ವಿಯಾದೆ. ಗೇಲಿ ಮಾಡಿದವರು ಕೂಡಾ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣೆಯಾದೆ. ಪ್ರವಾಹದಿಂದ ಕೃಷಿ ನಾಶವಾಗಿತ್ತು. ಆ ಸಮಯದಲ್ಲಿ ಪರ್ಯಾಯ ಕೃಷಿ ಮಾಡಿ ಗೆದ್ದೆ.

►ಸಾವಯವ ಗೊಬ್ಬರಗಳನ್ನು ಬಳಸಿ ಮಾಡುವ ಕೃಷಿ ಕುರಿತು ನಿಮ್ಮ ಅನಿಸಿಕೆ? ಇದರಿಂದ ರೈತ ಯಶಸ್ವಿಯಾಗಬಹುದೇ?

ಸಾವಯವ ಗೊಬ್ಬರದಲ್ಲಿ ಫಸಲು ಕಡಿಮೆಯಾದರೂ ಆಹಾರ ಗುಣಮಟ್ಟವನ್ನು ಹೊಂದಿರುತ್ತದೆ. ರಾಸಾಯನಿಕ ಬಳಸಿದರೆ ಮಣ್ಣಿನಲ್ಲಿರುವ ಫಲವತ್ತತೆ ನಾಶವಾಗುತ್ತದೆ. ಇದರಿಂದ ದೀರ್ಘಕಾಲದ ಕೃಷಿ ಅಸಾಧ್ಯ. ಸಾವಯವ ಕೃಷಿಯಲ್ಲಿ ಯಶಸ್ವಿಯಾಗಬಹುದು ಎಂಬುದಕ್ಕೆ ನಾನು ಉತ್ತಮ ನಿದರ್ಶನ. ನನ್ನ 6 ಎಕರೆ ಕೃಷಿ ಭೂಮಿಯಲ್ಲಿ ಎಲ್ಲಿ ಅಗೆದು ನೋಡಿದರೂ ಎರೆಹುಳ ಕಾಣಸಿಗುತ್ತದೆ. ಆದರೆ, ರಾಸಾಯನಿಕ ಗೊಬ್ಬರದಿಂದ ಇದು ಕಾಣಸಿಗದು.

►ಸರಕಾರ ನಿಮಗೆ ಯಾವ ರೀತಿಯಲ್ಲಿ ನೆರವಾಗುತ್ತಿದೆ?

ನಮಗೆ ಸರಕಾರದ ಅನುಕಂಪ ಅಗತ್ಯವಿಲ್ಲ. ಸರಕಾರ ನೆರವು ನೀಡುತ್ತೆ ಎಂದು ನಾವು ಕೃಷಿಯನ್ನು ಆಯ್ಕೆ ಮಾಡಿಲ್ಲ. ಒಂದು ಅರ್ಥದಲ್ಲಿ ನಮಗೆ ಸರಕಾರದ ನೆರವಿನ ಅಗತ್ಯವಿಲ್ಲ.

►ರೈತರ ಹೆಸರಲ್ಲಿ ರೈತರಲ್ಲದವರು ಸರಕಾರದ ನೆರವನ್ನು ದೋಚುತ್ತಿದ್ದಾರೆ ಎಂಬ ಆರೋಪ ಇದೆ. ನಿಜವೇ?

ಹೌದು. ಇದು ನಿಜ. ನರೇಗಾ ಯೋಜನೆಯಡಿ ರೈತರ ಸವಲತ್ತುಗಳು ಬೇರೆಯವರ ಹೆಸರಿನಲ್ಲಿ ದುರುಪಯೋಗವಾಗುತ್ತಿದೆ. ರೈತರಲ್ಲದವರು ಯಾರ್ಯಾರ ತೋಟದಲ್ಲಿ ನಿಂತು ಜಿಪಿಎಸ್ ಮಾಡಿಸಿ, ಹಣ ಜಮೆ ಮಾಡಿಸಿರುವ ನಿದರ್ಶನಗಳೂ ಇವೆ. ಜಿಪಿಎಸ್, ಸ್ಯಾಟ್‌ಲೈಟ್ ಹೆಸರಿನಲ್ಲಿ ಸರ್ವೇ ಕಾರ್ಯ ಮಾಡಿ ಅನಕ್ಷರಸ್ಥ, ಬಡ ರೈತರಿಗೆ ಮೋಸ ಮಾಡಿರುವ ಉದಾಹರಣೆಯೂ ಇದೆ. ಈ ರೀತಿ ಮೋಸ ಹೋದವರಲ್ಲಿ ನಾನು ಒಬ್ಬ. ಹೈನುಗಾರಿಕೆಗೆ ಸಬ್ಸಿಡಿಯಲ್ಲಿ ಎಷ್ಟೋ ಜರ್ಸಿ ದನಗಳು ತಾಲೂಕಿಗೆ ಬಂದಿವೆ. ಆದರೆ ತಾಲೂಕಿನ ಒಬ್ಬನೇ ಒಬ್ಬ ರೈತನಿಗೆ ಸಿಕ್ಕಿಲ್ಲ. ಅಧಿಕಾರಿಗಳು ತಮಗೆ ಬೇಕಾದ ದಲ್ಲಾಳಿಯ ಮೂಲಕ ಹಂಚಿಕೆ ಮಾಡಿದ್ದಾರೆ.

►ರೈತರ ಸಾಲ ಮತ್ತು ಆತ್ಮಹತ್ಯೆ ಕುರಿತು ನಿಮ್ಮ ಅಭಿಪ್ರಾಯ ಏನು?

 ದ.ಕ.ದಲ್ಲಿ ರೈತರ ಆತ್ಮಹತ್ಯೆ ಕಡಿಮೆ. ಜಿಲ್ಲೆಯ ರೈತರು ಕೃಷಿಯೊಂದಿಗೆ ವಾಣಿಜ್ಯ ಬೆಳೆ ಬೆಳೆಯುವುದರಿಂದ ವರಮಾನ ಸಮತೋಲನವಾಗುತ್ತಿದೆ. ಉ.ಕ., ಬಯಲುಸೀಮೆಯಲ್ಲಿ ಮಳೆ ಕೊರತೆ, ಸರಿಯಾದ ಮಾರುಕಟ್ಟೆ ಇಲ್ಲದಿರುವುದರಿಂದ ನಷ್ಟವಾಗಿ ರೈತರು ಆತ್ಮಹತ್ಯೆ ಮಾಡುತ್ತಾರೆ. ಬ್ಯಾಂಕ್‌ಗಳು ರೈತರಿಗೆ ಸಾಲ ಕೊಡುವಾಗ ಎಷ್ಟು ಸಾಲ ಕೊಡಬಹುದು ಎಂಬುದನ್ನು ಸ್ಥಳಕ್ಕೆ ತೆರಳಿ ಪರಶೀಲಿಸಿ ಕೊಡಬೇಕು. ಇಲ್ಲದಿದ್ದರೆ ರೈತರು ಲೆಕ್ಕಕ್ಕಿಂತ ಹೆಚ್ಚು ಸಾಲ ಪಡೆದು ಅದನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

►ಸರಕಾರದಿಂದ ಮತ್ತು ಸಮಾಜದಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ.

ದೇಶದಲ್ಲಿ ಸಮಗ್ರ ಕೃಷಿ ನೀತಿ ಜಾರಿಯಾಗಬೇಕು. ಸರಕಾರ ಸಂಪೂರ್ಣವಾಗಿ ರೈತರ ಪರವಾಗಿದ್ದರೆ ಕಾರ್ಪೊರೇಟ್‌ಗಿಂತ ಹೆಚ್ಚಿನ ಆದಾಯವನ್ನು ಕೃಷಿಯಲ್ಲಿ ಪಡೆದುಕೊಳ್ಳಬಹುದು. ಕೃಷಿಕರು ತಮ್ಮ ಫಲವತ್ತಾದ ಭೂಮಿಯನ್ನು ಮಾರಾಟ ಮಾಡಿ ಪಟ್ಟಣದತ್ತ ತೆರಳುತ್ತಿದ್ದಾರೆ. ಇದನ್ನು ಸರಕಾರ ತಡೆಯಬೇಕಾಗಿದೆ. ಇಲ್ಲದಿದ್ದರೆ ದೇಶದಲ್ಲಿ ಕೃಷಿ ಬಿಕ್ಕಟ್ಟು ಉಂಟಾಗಬಹುದು.

►ಕೃಷಿಯಿಂದ ನೀವು ಸಂತೃಪ್ತರೆ?

 ಸಂತೃಪ್ತನಾಗಿದ್ದೇನೆ. ತನ್ನಲ್ಲಿ 16 ದನಗಳಿದ್ದು ದಿನಕ್ಕೆ 80 ಲೀಟರ್ ಹಾಲು ಕೊಡುತ್ತಿದೆ. ಹಾಲನ್ನು ಪ್ಯಾಕೆಟ್ ಮಾಡಿ ಲೀಟರ್‌ಗೆ 38 ರೂ.ನಂತೆ ಮಾರಾಟ ಮಾಡುತ್ತಿದ್ದೇನೆ. ಇದರಿಂದ ತಿಂಗಳಿಗೆ 30 ಸಾವಿರ ರೂ. ಆದಾಯವೂ ಬರುತ್ತಿದೆ.

►ನಿಮ್ಮ ಅನಂತರ ಈ ಕೃಷಿ ಮುಂದುವರಿಯಬಹುದೇ?

ನನ್ನ ಪತ್ನಿ ಹಾಗೂ ನಾಲ್ಕು ಮಕ್ಕಳು ಕೃಷಿ ಪ್ರಿಯರೇ. ತನ್ನ ಎಲ್ಲ ಕಾರ್ಯಗಳಿಗೆ ಇವರೇ ಬೆನ್ನೆಲುಬು. ಇದನ್ನು ಮುಂದುವರಿಸುವ ಭರವಸೆ, ಪ್ರಯತ್ನದೊಂದಿಗೆ ನಾವಿದ್ದೇವೆ.

share
ಅಬ್ದುಲ್ ರಹಿಮಾನ್ ತಲಪಾಡಿ
ಅಬ್ದುಲ್ ರಹಿಮಾನ್ ತಲಪಾಡಿ
Next Story
X