Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ರೈತರಿಗೆ ಬೇಕಾಗಿದ್ದು ಅನುಕಂಪವಲ್ಲ,...

ರೈತರಿಗೆ ಬೇಕಾಗಿದ್ದು ಅನುಕಂಪವಲ್ಲ, ಉತ್ತೇಜನ

ನಿವೃತ್ತ ಬದುಕಿನಲ್ಲಿ ಕೃಷಿ ಆಶ್ರಯಿಸಿದ ಕೃಷ್ಣ ನಾಯ್ಕ

ಹಂಝ ಮಲಾರ್ಹಂಝ ಮಲಾರ್23 Dec 2018 11:04 AM IST
share
ರೈತರಿಗೆ ಬೇಕಾಗಿದ್ದು ಅನುಕಂಪವಲ್ಲ, ಉತ್ತೇಜನ

ಇಂದು ಕಿಸಾನ್ ದಿನ: ಈ ಹಿನ್ನೆಲೆಯಲ್ಲಿ ನಾಡಿನ ವಿವಿಧ ರೈತರನ್ನು ಪತ್ರಿಕೆ ಸಂದರ್ಶನ ಮಾಡಿದೆ. ಅವರ ಸಾಧನೆ, ಕೃಷಿಯ ಅನುಭವಗಳು, ಎದುರಿಸುತ್ತಿರುವ ಸವಾಲು, ಕೃಷಿಯ ಮೂಲಕ ಅವರು ಕಟ್ಟಿಕೊಂಡಿರುವ ಬದುಕನ್ನು ರೈತರು ಹಂಚಿಕೊಂಡಿದ್ದಾರೆ.

ಕೆನರಾ ಬ್ಯಾಂಕ್‌ನ ನಿವೃತ್ತ ಅಧಿಕಾರಿಯಾಗಿರುವ ಮೂಲತಃ ಬಂಟ್ವಾಳ ತಾಲೂಕಿನ ಸಜಿಪ ನಿವಾಸಿಯಾಗಿದ್ದ ಕೃಷ್ಣ ನಾಯ್ಕ(69)ಸದ್ಯ ಪಾವೂರು ಗ್ರಾಮದ ಪಾವೂರು ಗುತ್ತು ಹೊಸಮನೆ ಎಂಬಲ್ಲಿ ನೆಲೆಸಿ ಪ್ರಮುಖ ಕೃಷಿಕರಾಗಿ ಗುರುತಿಸಲ್ಪಟ್ಟಿದ್ದಾರೆ. ಉದ್ಯೋಗದಿಂದ ನಿವೃತ್ತರಾದ ಬಳಿಕ ಸಜಿಪ ಗ್ರಾಮದಿಂದ ತಾಯಿಯ ತವರೂರಾದ ಪಾವೂರು ಗ್ರಾಮದಲ್ಲಿ ನೆಲೆಸಿ ಕಳೆದ ನಾಲ್ಕು ವರ್ಷಗಳಿಂದ ಸುಮಾರು 4 ಎಕರೆ ಜಮೀನಿನಲ್ಲಿ 'ಭತ್ತ' ಬೆಳೆಯುತ್ತಿದ್ದಾರೆ. ಮಕ್ಕಳು ವಿದೇಶದಲ್ಲಿದ್ದಾರೆ. ನಿವೃತ್ತಿಯ ಬದುಕಿಗೆ ಯಾವುದೇ ತೊಡಕೂ ಇಲ್ಲ. ಆದರೆ, ಕೃಷಿ ಯೋಗ್ಯ ಭೂಮಿಯನ್ನು ಪಾಳು ಬೀಳಲು ಬಿಡಬಾರದು ಮತ್ತು ಹಿರಿಯರ ಸಂಪ್ರದಾಯವನ್ನು ಕೈ ಬಿಡಬಾರದು ಎಂಬ ಉದ್ದೇಶದಿಂದ 'ಭತ್ತ' ಬೆಳೆಯುತ್ತಿರುವ ಕೃಷ್ಣ ನಾಯ್ಕರೊಂದಿಗೆ 'ವಾರ್ತಾಭಾರತಿ' ಮಾತನಾಡಿಸಿದಾಗ.

►ನೀವು ಮಾಡುತ್ತಿರುವ ಪ್ರಮುಖ ಕೃಷಿ ಯಾವುದು? ಎಷ್ಟು ಸಮಯದಿಂದ ಮಾಡುತ್ತಿದ್ದೀರಿ? ಇದು ನಿಮ್ಮ ಬದುಕಿಗೆ ಎಷ್ಟರ ಮಟ್ಟಿಗೆ ಪ್ರಯೋಜನಕಾರಿ, ಲಾಭದಾಯಕವಾಗಿದೆ?

 ಸುಮಾರು ನಾಲ್ಕು ಎಕರೆ ಜಮೀನಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಭತ್ತ ಬೆಳೆಯುತ್ತಿದ್ದೇನೆ. ಮೊದಲ ಸಲ 70 ಕ್ವಿಂಟಾಲ್ ಮತ್ತು ಕಳೆದ ಸಲ 51 ಕ್ವಿಂಟಾಲ್ ಭತ್ತ ಬೆಳೆದೆ.. ಅದರ ನಡುವಿನ ಎರಡು ಅವಧಿಯಲ್ಲೂ ಇಳುವರಿ ಕಡಿಮೆ ಇತ್ತು. ನಾನು ಲಾಭದ ದೃಷ್ಟಿಯಿಂದ ಭತ್ತ ಬೆಳೆಯುತ್ತಿಲ್ಲ. ಆದರೆ, ಭವಿಷ್ಯದಲ್ಲಿ ಭತ್ತ ಕಣ್ಮರೆಯಾಗಬಾರದು ಮತ್ತು ಹಿರಿಯರು ಬೆಳೆದ ಈ ಭೂಮಿಯನ್ನು ಪಾಳುಬೀಳಬಾರದು ಎಂಬ ಉದ್ದೇಶದಿಂದ ಕೃಷಿಯಲ್ಲಿ ತೊಡಗಿಸಿಕೊಂಡಿರುವೆ. 

►ಕೃಷಿಯನ್ನೇ ಆಯ್ಕೆ ಮಾಡಿಕೊಳ್ಳಲು ಮುಖ್ಯ ಕಾರಣವೇನು?

ನಿಜ ಹೇಳಬೇಕೆಂದರೆ, ನನಗೆ ಬಾಲ್ಯದಲ್ಲೇ ಕೃಷಿಯ ಒಡನಾಟವಿತ್ತು. ಒಂದು ರೀತಿಯ ಸೆಳೆತವಿತ್ತು. ಆದರೆ, ನಾನು ಬ್ಯಾಂಕ್ ಅಧಿಕಾರಿಯಾದೆ. ನಿವೃತ್ತಿಯಾದ ತಕ್ಷಣ ನನ್ನೂರು ಸಜಿಪದಿಂದ ಪಾವೂರಿಗೆ ಬಂದೆ. ಫಲವತ್ತಾದ ಸುಮಾರು 4 ಎಕರೆ ಜಮೀನು ಪಾಳು ಬೀಳುವ ಸ್ಥಿತಿಯಲ್ಲಿತ್ತು. ವೃತ್ತಿ ಜೀವನಕ್ಕೆ ಯಾವುದೇ ತೊಂದರೆ ಇಲ್ಲದಿದ್ದರೂ ಕೂಡ ಬಾಲ್ಯದ ಕೃಷಿಯ ಒಡನಾಟ ಮತ್ತೆ ನನ್ನನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿತು.

►ಆರಂಭದಲ್ಲಿ ನೀವು ಎದುರಿಸಿದ ಸವಾಲುಗಳು ಏನೇನು? ಇದರ ಸೋಲು ಗೆಲುವುಗಳನ್ನು ಹಂಚಿ ಕೊಳ್ಳಿ.

ಬದುಕಿನ ಎಲ್ಲಾ ಕ್ಷೇತ್ರದಲ್ಲೂ ಸೋಲು ಗೆಲುವು ಇದ್ದದ್ದೇ. ನಮಗೆ ನೀರಿಗೆ ಯಾವುದೇ ತೊಂದರೆ ಇಲ್ಲ. ಭೂಮಿಯೂ ಫಲವತ್ತಾಗಿತ್ತು. ನಮ್ಮ ಕನಸಿನಂತೆ, ನಮ್ಮ ಇಚ್ಛೆಯಂತೆ ಕೃಷಿ ಮಾಡಿಸಲು ಕೆಲಸಗಾರರ ಕೊರತೆ ಇತ್ತು. ಇನ್ನೊಂದೆಡೆ ಸಾಗಾಟದ ಸಮಸ್ಯೆಯೂ ಇತ್ತು. ಕೃಷಿ ಯಂತ್ರ ತರಿಸಲು ಸೂಕ್ತ ವ್ಯವಸ್ಥೆಯೂ ಇರಲಿಲ್ಲ. ಆದಾಗ್ಯೂ ನಾನು ಕೃಷಿ ಇಲಾಖೆಯ ಅಧಿಕಾರಿಯನ್ನು ಭೇಟಿ ಮಾಡಿ ಭತ್ತ ಬೆಳೆಗೆ ಸಂಬಂಧಿಸಿ ಚರ್ಚೆ ನಡೆಸಿದೆ. ಪೂರಕ ಸ್ಪಂದನೆ ಸಿಕ್ಕಿದ ಬಳಿಕ ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡೆ.

►ಸಾವಯವ ಗೊಬ್ಬರಗಳನ್ನು ಬಳಸಿ ಮಾಡುವ ಕೃಷಿ ಕುರಿತು ನಿಮ್ಮ ಅನಿಸಿಕೆ? ಇದರಿಂದ ರೈತ ಯಶಸ್ವಿಯಾಗಬಹುದೇ?

ಸಾವಯವ ಗೊಬ್ಬರ ಬಳಸಿ ಕೃಷಿ ಮಾಡುವುದರಿಂದ ನಮ್ಮ ಆರೋಗ್ಯ ಮಾತ್ರವಲ್ಲ ಭೂಮಿಯ ಆರೋಗ್ಯವೂ ಉತ್ತಮವಾಗಲಿದೆ.ಭೂಮಿ ಸದಾ ಫಲವತ್ತಾಗಿರುತ್ತದೆ, ನೀರೂ ಕೆಡುವುದಿಲ್ಲ, ಸಾವಯವ ಗೊಬ್ಬರವನ್ನು ಬಳಸುವುದರಿಂದ ಖಂಡಿತಾ ರೈತ ಯಶಸ್ವಿಯಾಗುತ್ತಾನೆ. ಅದರಲ್ಲಿ ಸಂಶಯವೇ ಬೇಡ.

►ಸರಕಾರ ನಿಮಗೆ ಯಾವ ರೀತಿಯಲ್ಲಿ ನೆರವಾಗುತ್ತಿದೆ?

ನಾನು ಹೆಚ್ಚಾಗಿ ಸರಕಾರಿ ಸೌಲಭ್ಯ ಪಡೆಯುವ ಬಗ್ಗೆ ಚಿಂತನೆ ನಡೆಸಿಲ್ಲ. ಆದರೆ ಪೂರಕ ಮಾಹಿತಿಯೊಂದಿಗೆ ಸಕಾಲದಲ್ಲಿ ಸರಕಾರದ ಕದ ತಟ್ಟಿದರೆ ಖಂಡಿತಾ ಹೊಸ ಹೊಸ ಯೋಜನೆಗಳ ಪ್ರಯೋಜನಪಡೆಯಲು ಸಾಧ್ಯವಿದೆ.

►ರೈತರ ಹೆಸರಲ್ಲಿ ರೈತರಲ್ಲದವರು ಸರಕಾರದ ನೆರವನ್ನು ದೋಚುತ್ತಿದ್ದಾರೆ ಎಂಬ ಆರೋಪ ಇದೆ. ನಿಜವೇ?

ಹೌದು... ರೈತರೇ ಅಲ್ಲದ ಕೆಲವರು ರೈತರು ಅಥವಾ ರೈತ ನಾಯಕರು ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲ, ಮುಗ್ಧ ರೈತರ ದಾರಿ ತಪ್ಪಿಸಲು ಸರಕಾರಿ ಯೋಜನೆಗಳನ್ನು ಸ್ವಾಹಾ ಮಾಡುತ್ತಿದ್ದಾರೆ. ಇದನ್ನು ತಡೆಯಲು ರೈತರು ಪ್ರಜ್ಞಾವಂತರಾಗಬೇಕು.ದೈನಂದಿನ ಆಗು-ಹೋಗುಗಳ ಬಗ್ಗೆ ತಿಳಿದುಕೊಂಡಿರಬೇಕು.

►ರೈತರ ಸಾಲ ಮತ್ತು ಆತ್ಮಹತ್ಯೆ ಕುರಿತು ನಿಮ್ಮ ಅಭಿಪ್ರಾಯ ಏನು?

ಸರಕಾರ ಸಕಾಲಕ್ಕೆ ಬೆಂಬಲ ಬೆಲೆ ಘೋಷಿಸಬೇಕು ಮತ್ತು ಬೆಳೆಗಳು ಕೆಡುವ ಮುನ್ನ ಸೂಕ್ತ ಬೆಲೆ ನಿಗದಿಪಡಿಸಿ ಖರೀದಿಸಬೇಕು. ಆವಾಗ ರೈತ ಸಾಲ ಮಾಡುವುದು ತಪ್ಪುತ್ತದೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವುದನ್ನೂ ತಪ್ಪಿಸಲು ಸಾಧ್ಯವಿದೆ. ಇನ್ನು ‘ಕೆಲವು ಮಂದಿ’ರೈತರ ಸಮಸ್ಯೆಯನ್ನು ದುರುಪಯೋಗಪಡಿಸುತ್ತಿದ್ದಾರೆ.ಅವರಿಗೆ ರೈತರ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಳ್ಳುವುದಕ್ಕಿಂತಲೂ ಅದರಿಂದ ಬೇಳೆ ಬೇಯಿಸಬೇಕು ಎಂಬ ತವಕ ಹೆಚ್ಚಿರುತ್ತದೆ.

►ಸರಕಾರದಿಂದ ಮತ್ತು ಸಮಾಜದಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ.

ಸರಕಾರ ಅಥವಾ ಸಮಾಜವು ರೈತರನ್ನು ಅನುಕಂಪದಿಂದ ನೋಡಬೇಕಿಲ್ಲ. ಸ್ವಾವಲಂಬಿ ಬದುಕಿಗಾಗಿ ಹೆಣಗಾಡುವ ರೈತರ ಕೃಷಿ ಚಟುವಟಿಕೆಗೆ ಉತ್ತೇಜನಕಾರಿ ಯೋಜನೆಗಳನ್ನು ಪ್ರಕಟಿಸಿ ಅವುಗಳು ಅರ್ಹ ರೈತರ ಮನೆಬಾಗಿಲಿಗೆ ತಲುಪುವಂತೆ ಮಾಡಬೇಕೇ ವಿನಃ ರೈತರ ಸಮಸ್ಯೆ ಹೆಚ್ಚಲು ಅಥವಾ ಅದು ಜೀವಂತವಾಗಿರಲು ಹೆಣಗಬಾರದು. ಕೇಂದ್ರ ಸರಕಾರವು ವರ್ತಕರು, ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ. ಹಾಗಾಗಬಾರದು, ರಾಜ್ಯ ಸರಕಾರಗಳಂತೆ ಕೇಂದ್ರ ಸರಕಾರವೂ ರೈತರ ಹಿತ ಕಾಪಾಡುವ ಯೋಜನೆ ರೂಪಿಸಬೇಕು.

►ಕೃಷಿಯಿಂದ ನೀವು ಸಂತೃಪ್ತರೆ?

ತುಂಬಾ ಸಂತೃಪ್ತ. ನನ್ನೊಂದಿಗೆ ನನ್ನ ಪತ್ನಿಯೂ ಗದ್ದೆಗಿಳಿಯುತ್ತಾರೆ. ಹೆಚ್ಚಾಗಿ ನಾನು ಯಂತ್ರವನ್ನೇ ಅವಲಂಬಿಸಿರುವೆ. ಕೆಲವು ಸಂದರ್ಭ ಅಂದರೆ ಗೊಬ್ಬರ ಹಾಕಲು ಕೂಲಿ ಕೆಲಸಗಾರರ ಅಗತ್ಯವಿದೆ. ಆವಾಗ ಅವರ ಕೊರತೆ ನಮ್ಮನ್ನು ಕಾಡುತ್ತದೆಯೇ ವಿನಃ ಉಳಿದಂತೆ ನನಗೆ ಆಶಾದಾಯಕವಾಗಿ ಕಂಡಿವೆ.

►ನಿಮ್ಮ ಅನಂತರ ಈ ಕೃಷಿ ಮುಂದುವರಿಯಬಹುದೇ?

ಮುಂದೇನು ಅಂತ ಗೊತ್ತಿಲ್ಲ. ಸದ್ಯ ನನಗೆ 69 ವರ್ಷ ವಯಸ್ಸು. ಆಸಕ್ತಿಯಿಂದ ಕೃಷಿಯಲ್ಲಿ ತೊಡಗಿಸಿಕೊಂಡಿರುವೆ.

share
ಹಂಝ ಮಲಾರ್
ಹಂಝ ಮಲಾರ್
Next Story
X